ಹಸುವಿನ ಹಿಂದು ಡ್ಯಾನ್ಸ್ ರೀಲ್ ಮಾಡುತ್ತಿರುವ ಹುಡುಗಿಯೊಬ್ಬಳ ಕಂಡು ಹಸು ಗರಂ ಆಗಿರುವ ಘಟನೆಯೊಂದು ನಡೆದಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಜನರು ನಕ್ಕೂ ನಕ್ಕೂ ಸುಸ್ತಾಗುತ್ತಿದ್ದಾರೆ.
‘rjkisnaa’ ಬಳಕೆದಾರರು ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸುಮಾರು ಮೂರು ಲಕ್ಷದಷ್ಟು ಲೈಕ್‌ಗಳನ್ನು ಪಡೆದುಕೊಂಡಿದೆ.
ಈ ವಿಡಿಯೋದಲ್ಲಿ ಟಿ-ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್ ಧರಿಸಿರುವ ಯುವತಿ ಹಸುವಿನ ಹಿಂದೆ ಚಿತ್ರೀಕರಣ ಮಾಡುತ್ತಿರುವುದನ್ನು ಕಾಣಬಹುದು. ಸೆಲೆನಾ ಗೊಮೆಜ್ ಅವರ ಕಾಮ್ ಡೌನ್ ಹಾಡಿಗೆ ನೃತ್ಯ ಮಾಡುತ್ತಿದ್ದಾಳೆ ಈ ಯುವತಿ.
ನೋಡುವಷ್ಟು ನೋಡಿದ ಹಸುವಿಗೆ ಇದು ಕಿರಿಕಿರಿಯಾಗಿದೆ. ಇಲ್ಲಿಂದ ಹೋಗ್ತಿಯೋ ಅಥವಾ ಏನಾದ್ರೂ ಮಾಡ್ಬೇಕೋ ಎನ್ನುವ ರೀತಿಯಲ್ಲಿ ಆ ಯುವತಿಯನ್ನು ಅಲ್ಲಿಂದ ಓಡಿಸಿದೆ. ನೃತ್ಯ ಮಾಡಿದ್ದರೆ ಈ ಯುವತಿಯ ವಿಡಿಯೋ ವೈರಲ್ ಆಗುತ್ತಿತ್ತೋ ಇಲ್ಲವೋ, ಆದರೆ ಹಸುವಿನಿಂದಾಗಿ ಇದೀಗ ಸಕತ್ ವೈರಲ್ ಆಗಿದೆ. ಕೋಪಗೊಂಡ ಹಸು ಯುವತಿಯ ಆಕ್ರಮಣ ಮಾಡಲು ಓಡುವುದನ್ನು ವಿಡಿಯೋದಲ್ಲಿ ನೋಡಬಹುದು.