ಹಿಂದೂ ಧರ್ಮದಲ್ಲಿ ಹಸುವಿಗೆ ತಾಯಿ ಸ್ಥಾನ ನೀಡಲಾಗಿದೆ. ಜನರು ಹಸುವನ್ನು ದೇವರೆಂದು ಭಾವಿಸಿ ಪೂಜೆ ಮಾಡ್ತಾರೆ. ಶತಮಾನಗಳಿಂದಲೂ ಹಸುವಿಗೆ ಹುಲ್ಲಿನ ಜೊತೆ ರೊಟ್ಟಿ, ಅನ್ನ, ಹಣ್ಣುಗಳನ್ನು ನೀಡಲಾಗುತ್ತದೆ.
ಆದ್ರೆ ಹಸುವಿಗೆ ಆಹಾರ ನೀಡುವ ವೇಳೆ ನಾವು ಮಾಡುವ ತಪ್ಪು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಸುವಿಗೆ ಆಹಾರ ನೀಡುವ ವೇಳೆ ಎಂದೂ ತಪ್ಪುಗಳನ್ನು ಮಾಡಬಾರದು.
ಹಸುವಿಗೆ ಆಹಾರ ನೀಡುವ ವೇಳೆ ಆಹಾರ ಹಳಸಿರದಂತೆ ನೋಡಿಕೊಳ್ಳಿ. ಕೆಲವರು ಮನೆಯಲ್ಲಿ ಉಳಿದ, ಹಳಸಿದ ಆಹಾರವನ್ನು ಕಸಕ್ಕೆ ಹಾಕುವ ಬದಲು ಹಸುವಿಗೆ ನೀಡ್ತಾರೆ. ಹೀಗೆ ಮಾಡಿದ್ರೆ ಅನೇಕ ಸಮಸ್ಯೆಗಳನ್ನು ಮೈಮೇಲೆಳೆದುಕೊಂಡಂತೆ. ಹಸುವಿಗೆ ಹಾಕುವ ಹಳಸಿದ ಆಹಾರ ತೊಂದರೆಗೆ ಕಾರಣವಾಗಬಹುದು.
ಹಸುವಿಗೆ ಆಹಾರ ನೀಡಿದ್ರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಆದ್ರೆ ಹಳಸಿದ ಆಹಾರ ಪಾಪಕ್ಕೆ ಕಾರಣವಾಗುತ್ತದೆ.
ಬಹುತೇಕರು ರೊಟ್ಟಿಯನ್ನು ಹಸುವಿಗೆ ನೀಡ್ತಾರೆ. ಹಸುವಿಗೆ ರೊಟ್ಟಿ ನೀಡುವ ವೇಳೆ ಎಂದೂ ರೊಟ್ಟಿ ಮಾತ್ರ ನೀಡಬಾರದು. ರೊಟ್ಟಿ ಜೊತೆ ಪಲ್ಯ ಅಥವಾ ಸಕ್ಕರೆಯನ್ನು ನೀಡಬೇಕು. ಮನೆಯಲ್ಲಿ ಮೊದಲು ಮಾಡಿದ ರೊಟ್ಟಿಯನ್ನು ಹಸುವಿಗೆ ನೀಡಬೇಕು. ಇದ್ರಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ.
ಸಮಸ್ಯೆಗಳಿಂದ ಬಳಲುತ್ತಿದ್ದರೆ, ಮಾನಸಿಕ ಸಮಸ್ಯೆ ಕಾಡುತ್ತಿದ್ದರೆ ಹಸುವಿಗೆ ಆಹಾರವನ್ನು ನೀಡಬೇಕು. ಪ್ರತಿ ದಿನ ಹಸುವಿಗೆ ರೊಟ್ಟಿ ನೀಡುವುದ್ರಿಂದ ಎಲ್ಲ ಸಮಸ್ಯೆ ದೂರವಾಗುತ್ತದೆ. ಹಸುವಿನಲ್ಲಿ ದೇವಾನುದೇವತೆಗಳು ನೆಲೆಸಿರುವುದು ಇದಕ್ಕೆ ಕಾರಣ.