ಹಸಿಮೆಣಸಿನಕಾಯಿ ಇಲ್ಲದೇ ಇದ್ರೆ ಅಡುಗೆ ಮಾಡುವುದೇ ಕಷ್ಟ. ತಿನಿಸುಗಳ ರುಚಿ ಹೆಚ್ಚಿಸುವ ಅತ್ಯಂತ ಅವಶ್ಯಕ ತರಕಾರಿ ಇದು. ಹೆಚ್ಚಿನ ಜನರಿಗೆ ಹಸಿಮೆಣಸಿನಕಾಯಿ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ತರಕಾರಿಗಳು ಮತ್ತು ದ್ವಿದಳ ಧಾನ್ಯಗಳ ಜೊತೆಗೆ ಇದನ್ನು ಸಲಾಡ್‌ಗಳಲ್ಲಿಯೂ ಬಳಸಲಾಗುತ್ತದೆ. ಕೆಲವರು ಚಪಾತಿ ಪಲ್ಯದ ಜೊತೆಗೆ ಹಸಿ ಮೆಣಸಿನಕಾಯಿಯನ್ನು ತಿನ್ನುತ್ತಾರೆ.
ಹಸಿ ಮೆಣಸಿನಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಸಿ, ಕಬ್ಬಿಣ, ತಾಮ್ರ, ಪೊಟ್ಯಾಸಿಯಮ್, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಅನೇಕ ರೀತಿಯ ಪೋಷಕಾಂಶಗಳಿವೆ. ಬೀಟಾ ಕ್ಯಾರೋಟಿನ್, ಕ್ರಿಪ್ಟೋಕ್ಸಾಂಥಿನ್, ಲುಟೀನ್-ಝೀಕ್ಸಾಂಥಿನ್ ಇತ್ಯಾದಿ ಆರೋಗ್ಯಕರ ಅಂಶಗಳಿವೆ.
ತೂಕ ಕಡಿಮೆ ಮಾಡಲು ಸಹಕಾರಿ: ಸ್ಥೂಲಕಾಯತೆಯಿಂದಾಗಿ ಅನೇಕ ರೀತಿಯ ಸಮಸ್ಯೆಗಳಾಗುತ್ತವೆ. ಹಸಿ ಮೆಣಸಿನಕಾಯಿಯ ಸೇವನೆಯಿಂದ ತೂಕವನ್ನು ನಿಯಂತ್ರಿಸಬಹುದು.
ಕಣ್ಣುಗಳಿಗೆ ಪ್ರಯೋಜನಕಾರಿ: ಹಸಿ ಮೆಣಸಿನಕಾಯಿಯು ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ. ಹಸಿ ಮೆಣಸಿನಕಾಯಿಯಲ್ಲಿರುವ ಬೀಟಾ ಕ್ಯಾರೋಟಿನ್ ಕಣ್ಣುಗಳನ್ನು ಆರೋಗ್ಯವಾಗಿಡುವುದರ ಜೊತೆಗೆ ದೃಷ್ಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಸಿರು ಮೆಣಸಿನಕಾಯಿಯಲ್ಲಿ ಲುಟೀನ್, ಜಿಯಾಕ್ಸಾಂಥಿನ್ ಮತ್ತು ಎಂಟಿಒಕ್ಸಿಡೆಂಟ್‌ಗಳಿವೆ. ಈ ಅಂಶಗಳು ಕೂಡ ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಕ್ಯಾನ್ಸರ್‌ಗೆ ಮದ್ದು : ಹಸಿಮೆಣಸಿನಕಾಯಿ ಸೇವನೆ ಮಾಡಿದ್ರೆ ಕ್ಯಾನ್ಸರ್ ಅನ್ನು ದೂರವಿಡಬಹುದು. ಇದರಲ್ಲಿರುವ ಎಂಟಿಒಕ್ಸಿಡೆಂಟ್ಸ್, ದೇಹದ ಆಂತರಿಕವಾಗಿ ಶುಚಿಗೊಳಿಸುತ್ತದೆ. ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುವ ಮೂಲಕ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಹೃದಯವನ್ನು ಆರೋಗ್ಯವಾಗಿಡಲು ಹಸಿ ಮೆಣಸಿನಕಾಯಿಯನ್ನು ಸೇವಿಸಬಹುದು. ಕ್ಯಾಪ್ಸೈಸಿನ್ ಎಂಬ ಸಂಯುಕ್ತವು ಇದರಲ್ಲಿ ಕಂಡುಬರುತ್ತದೆ, ಇದು ಮೆಣಸಿನಕಾಯಿಯನ್ನು ಕಟುವಾಗಿ ಮತ್ತು ಆರೋಗ್ಯಕರವಾಗಿ ಮಾಡುತ್ತದೆ. ಈ ಸಂಯುಕ್ತವು ಹೃದ್ರೋಗಗಳ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ಹೃದಯಕ್ಕೆ ರಕ್ಷಣೆ ನೀಡಲು ಪ್ರಯೋಜನಕಾರಿಯಾಗಿದೆ.
ಚರ್ಮಕ್ಕೆ ಪ್ರಯೋಜನಕಾರಿ: ವಿಟಮಿನ್-ಇ ಸಮೃದ್ಧವಾಗಿರುವ ಹಸಿಮೆಣಸಿನಕಾಯಿಗಳು ನಿಮ್ಮ ಚರ್ಮಕ್ಕೆ ಸಹ ಪ್ರಯೋಜನಕಾರಿ. ಇದು ನಿಮ್ಮ ಮುಖವನ್ನು ಬಿಗಿಯಾಗಿ ಇರಿಸುತ್ತದೆ ಮತ್ತು ಚರ್ಮವು ಯಾವಾಗಲೂ ಯಂಗ್ ಆಗಿ ಸುಂದರವಾಗಿಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ: ಹಸಿ ಮೆಣಸಿನಕಾಯಿಯು ಜೀರ್ಣಾಂಗ ವ್ಯವಸ್ಥೆಯನ್ನು ಸುಗಮವಾಗಿಡುತ್ತದೆ. ಹಸಿ ಮೆಣಸಿನಕಾಯಿಗಳು ಜಠರಗರುಳಿನ ಅಸ್ವಸ್ಥತೆಗಳ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಜಠರಗರುಳಿನ ಅಸ್ವಸ್ಥತೆಗಳು ಅಜೀರ್ಣ, ಅತಿಸಾರ ಮತ್ತು ಮಲಬದ್ಧತೆಯ ಲಕ್ಷಣಗಳನ್ನು ಒಳಗೊಂಡಿರುತ್ತವೆ. ಹಸಿಮೆಣಸಿನಕಾಯಿ ಸೇವನೆಯಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಶೀತ ಮತ್ತು ಜ್ವರಕ್ಕೆ ಮದ್ದು: ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ನಮ್ಮ ಮೂಗಿನಲ್ಲಿರುವ ಲೋಳೆಯ ಪೊರೆಗಳನ್ನು ಉತ್ತೇಜಿಸುತ್ತದೆ. ಇದು ನಮ್ಮ ನಿರ್ಬಂಧಿತ ಉಸಿರಾಟದ ವ್ಯವಸ್ಥೆಯನ್ನು ತೆರೆಯುತ್ತದೆ. ಶೀತ ಮತ್ತು ಕೆಮ್ಮಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ.
ರಕ್ತದೊತ್ತಡ ನಿಯಂತ್ರಣ : ಅಧಿಕ ರಕ್ತದೊತ್ತಡವು ಹೃದಯಕ್ಕೆ ಮಾರಕವಾಗುತ್ತದೆ. ಹಸಿ ಮೆಣಸಿನಕಾಯಿಯಲ್ಲಿ ಕಂಡುಬರುವ ಕ್ಯಾಪ್ಸೈಸಿನ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆಂಟಿಹೈಪರ್ಟೆನ್ಸಿವ್ ಗುಣಲಕ್ಷಣಗಳು ಇದರಲ್ಲಿ ಕಂಡುಬರುತ್ತವೆ. ಈ ಗುಣವು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ.
ಹಸಿ ಮೆಣಸಿನಕಾಯಿ ಸೇವನೆಯಿಂದಾಗುವ ಅನಾನುಕೂಲಗಳು
ಹಸಿ ಮೆಣಸಿನಕಾಯಿ ಸೇವನೆಯಿಂದ ಎಷ್ಟು ಪ್ರಯೋಜನಗಳಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ದಿನಕ್ಕೆ ಎಷ್ಟು ಹಸಿ ಮೆಣಸಿನಕಾಯಿಯನ್ನು ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಪ್ರತಿದಿನ 50 ಗ್ರಾಂಗಿಂತ ಹೆಚ್ಚು ಹಸಿ ಮೆಣಸಿನಕಾಯಿಯನ್ನು ಸೇವಿಸುವುದರಿಂದ ಬುದ್ಧಿಮಾಂದ್ಯತೆಯಂತಹ ಸಮಸ್ಯೆ ಉಂಟಾಗಬಹುದು ಎಂಬುದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಹಸಿ ಮೆಣಸಿನಕಾಯಿಯನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ವಿಷಕಾರಿ ಅಂಶವೂ ಹೆಚ್ಚಾಗುತ್ತದೆ.
ಹೊಟ್ಟೆಯಲ್ಲಿ ಉರಿ, ಊತ ಇತ್ಯಾದಿಗಳೂ ಉಂಟಾಗಬಹುದು. ಹಸಿ ಮೆಣಸಿನಕಾಯಿ ತಿನ್ನುವುದರಿಂದ ಅಸಿಡಿಟಿ ಉಂಟಾಗುತ್ತದೆ. ಆದ್ದರಿಂದ ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ.