ಹಸಿಮೆಣಸಿನಕಾಯಿಯನ್ನು ಸಾಮಾನ್ಯವಾಗಿ ನಿತ್ಯದ ಅಡುಗೆಗೆ ಬಳಸಲಾಗುತ್ತದೆ. ಆದರೆ ಅನೇಕರು ಇದನ್ನು ತಿನ್ನುವುದಿಲ್ಲ. ಹಸಿ ಮೆಣಸಿನಕಾಯಿ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗುತ್ತದೆ ಎಂದು ಭಯಪಡುವವರೂ ಇದ್ದಾರೆ. ಅನೇಕರಿಗೆ ಈ ಖಾರ ಕೂಡ ಇಷ್ಟವಾಗುವುದಿಲ್ಲ. ಆದರೆ ಈ ಕಟುವಾದ ತರಕಾರಿ ಕೂಡ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ.
ತ್ವಚೆ ಸುಂದರವಾಗಿರುತ್ತದೆ : ಹಸಿ ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಬೀಟಾ-ಕ್ಯಾರೋಟಿನ್ ಸಹ ಇದರಲ್ಲಿದೆ. ಈ ಎರಡೂ ಪೋಷಕಾಂಶಗಳು ನಮಗೆ ಪ್ರಯೋಜನಕಾರಿ. ಚರ್ಮದ ಹೊಳಪು, ದೃಢತೆ ಮತ್ತು ಉತ್ತಮ ವಿನ್ಯಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕಬ್ಬಿಣದಲ್ಲಿ ಸಮೃದ್ಧವಾಗಿದೆ : ಹಸಿ ಮೆಣಸಿನಕಾಯಿಯಲ್ಲಿ ಬಹಳಷ್ಟು ಕಬ್ಬಿಣದ ಅಂಶ ಕಂಡುಬರುತ್ತದೆ. ಇದು ನಮ್ಮ ದೇಹದೊಳಗೆ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಬಹಳ ಮುಖ್ಯ. ಇದರಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ ಹಾಗೂ ದೇಹವು ಕ್ರಿಯಾಶೀಲವಾಗಿರುತ್ತದೆ. ಹೆಚ್ಚು ಆಯಾಸವಾಗುವುದಿಲ್ಲ. ಕಬ್ಬಿಣವು ನಮ್ಮ ಚರ್ಮಕ್ಕೆ ಸಹ ಪ್ರಯೋಜನಕಾರಿಯಾಗಿದೆ .
ದೇಹದ ಉಷ್ಣತೆ ನಿಯಂತ್ರಿಸುತ್ತದೆ : ಕ್ಯಾಪ್ಸೈಸಿನ್ ಎಂಬ ಸಂಯುಕ್ತವು ಹಸಿರು ಮೆಣಸಿನಕಾಯಿಯಲ್ಲಿ ಕಂಡುಬರುತ್ತದೆ. ಮೆದುಳಿನಲ್ಲಿರುವ ಹೈಪೋಥಾಲಮಸ್‌ನ ತಂಪಾಗಿಸುವ ಕೇಂದ್ರವನ್ನು ಸಕ್ರಿಯವಾಗಿಡಲು ಇದು ಸಹಾಯಕವಾಗಿದೆ. ಈ ಕಾರಣದಿಂದಾಗಿ ದೇಹದ ಉಷ್ಣತೆಯನ್ನು ನಿಯಂತ್ರಿಸಬಹುದು.
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ: ಹಸಿರು ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಇರುವುದರಿಂದ, ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತದೆ. ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವವರಿಗೆ ಹಸಿರು ಮೆಣಸಿನಕಾಯಿಯು ರಾಮಬಾಣಕ್ಕಿಂತ ಕಡಿಮೆಯಿಲ್ಲ. ಇದು ಕಫವನ್ನು ಕಡಿಮೆ ಮಾಡುತ್ತದೆ.