alex Certify ಹಸಿ ತರಕಾರಿಯಲ್ಲಿದೆ ʼಆರೋಗ್ಯʼದ ಗುಟ್ಟು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿ ತರಕಾರಿಯಲ್ಲಿದೆ ʼಆರೋಗ್ಯʼದ ಗುಟ್ಟು…..!

ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ರೋಗ ನಿಮ್ಮ ಬಳಿ ಸುಳಿಯದಂತೆ ಎಚ್ಚರ ವಹಿಸಬಹುದು. ಅವುಗಳ ಬಗ್ಗೆ ತಿಳಿಯೋಣ…

ಹಣ್ಣು ತರಕಾರಿ ಧಾನ್ಯಗಳಲ್ಲಿ ವಿಫುಲವಾದ ಪೌಷ್ಟಿಕಾಂಶ ಗುಣಗಳು ಇರುತ್ತವೆ. ನಿತ್ಯ ಅಡುಗೆಗೆ ಬಳಸುವ ಟೊಮ್ಯಾಟೋವನ್ನು ಬೇಯಿಸಿ ತಿನ್ನುವ ಬದಲು ಹಸಿಯಾಗಿ ತಿನ್ನುವುದೇ ಹೆಚ್ಚು ಪ್ರಯೋಜನಕಾರಿ. ದಿನಕ್ಕೊಂದು ಅಥವಾ ಎರಡು ಟೊಮೆಟೊವನ್ನು ಹಸಿಯಾಗಿ ತಿನ್ನುವುದರಿಂದ ನಿತ್ಯದ ಅಗತ್ಯದ ಅರ್ಧದಷ್ಟು ವಿಟಮಿನ್ ಎ ದೊರೆಯುತ್ತದೆ.

ಬೇಯಿಸುವುದರಿಂದ ಇದರ ವಿಟಮಿನ್ ನಷ್ಟ ಆಗುವುದು ಮಾತ್ರವಲ್ಲ, ರಕ್ತದಲ್ಲಿ ಸಕ್ಕರೆ ಪ್ರಮಾಣವೂ ಹೆಚ್ಚಾಗುತ್ತದೆ. ಹಾಗಾಗಿ ಮಧುಮೇಹಿಗಳು ಟೊಮ್ಯಾಟೋವನ್ನು ಹಸಿಯಾಗಿ ಸೇವಿಸುವುದು ಒಳ್ಳೆಯದು.

ಇದರಲ್ಲಿ ಅಧಿಕ ಪ್ರಮಾಣದ ವಿಟಮಿನ್ ಎ ಇರುವುದರಿಂದ ಕಣ್ಣು ಮತ್ತು ಚರ್ಮಕ್ಕೆ ಅತ್ಯುತ್ತಮ ಕೆಂಪು ಬಣ್ಣಕ್ಕೆ ಕಾರಣ ಆಗುವ ಲೈಕೋಪಿನ್ ಮತ್ತು ಕ್ಯಾಲ್ಸಿಯಂ ಹೆಚ್ಚಳಕ್ಕೆ ನೆರವಾಗುತ್ತದೆ.

ಇದರ ಪೋಷಕಾಂಶಗಳು ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಕಡಿಮೆಗೊಳಿಸಿ ಹೃದಯ ಸ್ತಂಭನ ಮುಂತಾದ ತೊಂದರೆಗಳಿಂದ ರಕ್ಷಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...