ಸಾಮಾನ್ಯವಾಗಿ ಪ್ರತಿಯೊಬ್ಬರೂ ಅಡುಗೆಗೆ ಟೊಮೆಟೋ ಬಳಸ್ತಾರೆ. ಕೆಂಪು ಕೆಂಪನೆಯ ಫ್ರೆಶ್ ಟೊಮೆಟೋದ ರುಚಿ, ಅದರಲ್ಲಿರೋ ಆರೋಗ್ಯಕರ ಅಂಶಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಟೊಮೆಟೋ ಇಲ್ಲದೆ ಅಡುಗೆಯೇ ಅಪೂರ್ಣವೆನಿಸುತ್ತದೆ. ಕೆಂಪು ಟೊಮೆಟೊಗಳನ್ನು ಸೂಪ್ ಮತ್ತು ಸಾಸ್‌ಗಳಲ್ಲಿಯೂ ಬಳಸಲಾಗುತ್ತದೆ. ಆದರೆ ನೀವು ಎಂದಾದರೂ ಹಸಿರು ಟೊಮೆಟೊಗಳನ್ನು ಸೇವಿಸಿದ್ದೀರಾ? ಇದರ ಪ್ರಯೋಜನಗಳನ್ನು ತಿಳಿದರೆ ನೀವು ಕೂಡ ಹಸಿರು ಟೊಮೆಟೋದ ಫ್ಯಾನ್ ಆಗೋದು ಗ್ಯಾರಂಟಿ.
ಹಸಿರು ಟೊಮೆಟೊದಲ್ಲಿ ಪೋಷಕಾಂಶಗಳ ಕೊರತೆಯಿಲ್ಲ. ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಇದರಲ್ಲಿ ಕಂಡುಬರುತ್ತದೆ. ಇವೆಲ್ಲವೂ ನಮ್ಮ ದೇಹಕ್ಕೆ ಬೇಕು. ಕೊರೊನಾದಂತಹ ಸಾಂಕ್ರಾಮಿಕ ರೋಗಗಳು ಎಲ್ಲಾ ಕಡೆ ಹರಡಿರೋದ್ರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ನಿಯಮಿತವಾಗಿ ಹಸಿರು ಟೊಮೆಟೊಗಳನ್ನು ಸೇವಿಸಿದರೆ ದೇಹವು ಅದರಿಂದ ವಿಟಮಿನ್ ಸಿಯನ್ನು ಪಡೆಯುತ್ತದೆ. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹವಾಮಾನ ಬದಲಾವಣೆಯಿಂದ ಕಾಡುವ ನೆಗಡಿ, ಕೆಮ್ಮು, ಜ್ವರದಿಂದಲೂ ಹಸಿರು ಟೊಮೆಟೋ ನಮಗೆ ರಕ್ಷಣೆ ಸಿಗುತ್ತದೆ.
ಹಸಿರು ಟೊಮೆಟೊಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಏಕೆಂದರೆ ಇದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಬೀಟಾ ಕ್ಯಾರೋಟಿನ್ ಹೇರಳವಾಗಿ ಕಂಡುಬರುವುದರಿಂದ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ. ಹಸಿರು ಟೊಮೆಟೋ ಕಣ್ಣಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಪ್ರಸ್ತುತ ಯುಗದ ಅಸ್ತವ್ಯಸ್ತವಾಗಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಬಹಳಷ್ಟು ಹೆಚ್ಚಾಗಿದೆ. ಇದರಿಂದಾಗಿ ಅಧಿಕ ರಕ್ತದೊತ್ತಡದ ಸಮಸ್ಯೆ ಉದ್ಭವಿಸಬಹುದು. ಈ ಸಮಸ್ಯೆಗೆ ತುತ್ತಾಗಿರುವವರಿಗೆ ಹಸಿರು ಟೊಮೆಟೊ ಉತ್ತಮ ಮನೆಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಪೊಟ್ಯಾಶಿಯಂ ಹೇರಳವಾಗಿರುವುದರಿಂದ ಹಸಿರು ಟೊಮ್ಯಾಟೋ ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ.