ಕಪ್ಪು ಕಡಲೆ ಗಣಪತಿಗೆ ಬಲುಪ್ರಿಯ. ಹಲವು ಮನೆಗಳಲ್ಲಿ ಇದನ್ನು ನಿತ್ಯ ಗಣಪತಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಇದನ್ನು ಹಸಿಯಾಗಿಯೇ ಸೇವಿಸುವುದರಿಂದ ಹಲವು ಸಮಸ್ಯೆಗಳು ಹೇಳ ಹೆಸರಿಲ್ಲದಂತೆ ನಿವಾರಣೆಯಾಗುತ್ತವೆ.
ಇದನ್ನು ಹಸಿಯಾಗಿಯೇ ಅಥವಾ ಹಿಂದಿನ ದಿನ ನೆನೆಸಿಟ್ಟು ಮರುದಿನ ಬೆಳಗ್ಗೆ ಸೇವಿಸುವುದರಿಂದ ಮಲಬದ್ಧತೆಯಂಥ ಸಮಸ್ಯೆಗಳು ದೂರವಾಗುತ್ತವೆ. ನಿತ್ಯ ಇದನ್ನು ಸೇವಿಸುವುದರಿಂದ ರಕ್ತಹೀನತೆಯಂಥ ಸಮಸ್ಯೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
ಸಕ್ಕರೆ ಕಾಯಿಲೆ ಇರುವವರಿಗೂ ಈ ಹಸಿ ಅಥವಾ ನೆನೆಸಿಟ್ಟ ಕಡಲೆ ಅತ್ಯುತ್ತಮ ಆಹಾರವಾಗಬಲ್ಲದು. ದೇಹ ತೂಕ ಇಳಿಸುವ ಪ್ಲಾನ್ ಹಾಕಿಕೊಂಡವರು ನಿತ್ಯ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ, ದೀರ್ಘ ಕಾಲ ಹೊಟ್ಟೆ ತುಂಬಿದ ಅನುಭವ ನೀಡುವ ಇದರ ಸೇವನೆಯಿಂದ ತಿಂಗಳೊಳಗೆ ದೇಹ ತೂಕ ಕಡಿಮೆ ಮಾಡಬಹುದು.
ಇದನ್ನು ತುಸುವೇ ಹುರಿದು ಪುಡಿ ಮಾಡಿ ಬೆಲ್ಲ ಬೆರೆಸಿ ಪಂಚಕಜ್ಜಾಯ ರೂಪದಲ್ಲಿ ಅಥವಾ ಉಂಡೆ ಕಟ್ಟಿ ಕೊಟ್ಟರೆ ಮಕ್ಕಳಿಗೂ ಇಷ್ಟವಾಗುತ್ತದೆ. ಪೋಷಕಾಂಶ ಹಾಗೂ ಫೈಬರ್ ಗಳ ಆಗರವಾಗಿರುವ ಕಡಲೆಯನ್ನು ನಿತ್ಯ ಸೇವಿಸಿ, ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.