ಹಸಿಮೆಣಸಿನ ಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ವಿಟಮಿನ್ ಎ, ಕಬ್ಬಿಣ, ಮೆಗ್ನಿಷಿಯಂನಂತಹ ಪೋಷಕಾಂಶಗಳು ಇವೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭಗಳು ಸಿಗುತ್ತವೆ.
ಹಸಿಮೆಣಸಿನ ಕಾಯಿಯಲ್ಲಿ ಇರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಕಾಳುಗಳ ಜೊತೆಯಲ್ಲಿ ಬೆರೆಸಿ ತಿನ್ನುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತದೆ. ಅಜೀರ್ಣ, ಗ್ಯಾಸ್, ಮಲಬದ್ಧತೆ ಸಮಸ್ಯೆಗಳು ದೂರವಾಗುತ್ತವೆ.
ಹಸಿಮೆಣಸಿನ ಕಾಯಿ ಬೀಜ ತೆಗೆಯದೆ ಸೇವನೆ ಮಾಡಿದರೆ ಆರೋಗ್ಯಕ್ಕೆ ಹೆಚ್ಚು ಲಾಭ. ಈ ಬೀಜಗಳಲ್ಲಿ ಫೈಟೋಸ್ಟರಲ್ ಎಂಬ ಅಂಶ ಇದ್ದು, ಇದು ರಕ್ತನಾಳಗಳಲ್ಲಿ ಇರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಸಕ್ಕರೆ ಕಾಯಿಲೆ ಇರುವವರು ಪ್ರತಿನಿತ್ಯ ಆಹಾರದಲ್ಲಿ ಹಸಿಮೆಣಸಿನ ಕಾಯಿಯನ್ನು ಸೇವನೆ ಮಾಡಿ. ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಹಸಿಮೆಣಸಿನ ಕಾಯಿಯಲ್ಲಿ ಆಂಟಿಬಯೋಟಿಕ್ ಗುಣಗಳಿದ್ದು, ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ.