ಹೊಸ ವರ್ಷದೊಂದಿಗೆ, ಹೊಸ ಸಾಧನೆ, ಒಳಿತು ಮಾಡುವ ಬೆಟ್ಟದಷ್ಟು ಭರವಸೆ ಸೃಷ್ಟಿಯಾಗತ್ತೆ. ಮುಂದಿನ ಪೀಳಿಗೆಗೆ ದಾರಿ ದೀಪವಾಗುವ, ಹೆಮ್ಮೆ ಪಡುವಂತಹ ಉತ್ತಮ ನಾಳೆಗಳನ್ನ ನಿರ್ಮಿಸುವ ಧ್ಯೇಯ ನಮ್ಮಲ್ಲಿರಬೇಕಷ್ಟೆ. ಈಗಾಗಲೇ ಪ್ರಪಂಚದಾದ್ಯಂತ ಸಾಕಷ್ಟು ಜನರು ತಮ್ಮ ಸಣ್ಣ ಸಣ್ಣ ಕಾರ್ಯಗಳಿಂದ ಮಾನವೀಯತೆಯ ಮಹತ್ವ ತಿಳಿಸಿದ್ದಾರೆ.
ಮಾನವೀಯತೆಯ ಇಂಥದ್ದೆ ಒಂದು ಉದಾಹರಣೆ ಇಕ್ರಮ್ ಎಂಬ ಟರ್ಕಿ ದೇಶದ ನಿವಾಸಿ. ಯೀಮ್ ಎಟ್ ಗ್ಯಾಲೆರಿಸಿ ಎಂಬ ಹೆಸರಿನ ಮಾಂಸದ ಅಂಗಡಿಯನ್ನು ಹೊಂದಿರುವ ಇಕ್ರಮ್ ಕೊರ್ಕ್‌ಮಾಜರ್, ತನ್ನ ಅಂಗಡಿಯ ಮುಂದೆ ಹಸಿದು ಬರುವ ಪ್ರಾಣಿಗಳನ್ನ ಓಡಿಸದೆ ಪ್ರತಿದಿನ ಆಹಾರ ನೀಡುತ್ತಾರೆ.
ಈ ಹಿಂದೆಯು, ಇಕ್ರಮ್ ತನ್ನ ಅಂಗಡಿಯ ಮುಂದೆ ಊಟಕ್ಕಾಗಿ ಕಾಯುವ ಬೀದಿನಾಯಿಗಳು ಮತ್ತು ಬೆಕ್ಕುಗಳ ವಿಡಿಯೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅವರ ಪ್ರೊಫೈಲ್‌ನಲ್ಲಿನ ಇತ್ತೀಚಿನ ವಿಡಿಯೊವು ಅವರು ಆಹಾರದ ಬಟ್ಟಲಿನೊಂದಿಗೆ ಅಂಗಡಿಯ ಹೊರಗಡೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ.
ಅವರನ್ನ ನೋಡಿ ಉತ್ಸುಕವಾದ ಬೀದಿ ನಾಯಿ ಬಾಲ ಅಲ್ಲಾಡಿಸುತ್ತದೆ. ಬೀದಿ ನಾಯಿ, ಬೆಕ್ಕುಗಳಿಗೆ ಇಕ್ರಮ್ ಪ್ರತಿದಿನ ತಮ್ಮ ಅಂಗಡಿಯಲ್ಲೆ ಸಿಗುವ ಮಾಂಸದ ತುಂಡುಗಳನ್ನ ಹಾಕುತ್ತಾರೆ. ಅವುಗಳು ಅಷ್ಟೇ ಇಕ್ರಮ್ ನನ್ನು ಕಂಡ ತಕ್ಷಣ ಓಡಿ ಬಂದು ಅಂಗಡಿಯ ಬಾಗಿಲಲ್ಲಿ ನಿಂತುಕೊಳ್ಳುತ್ತವೆ. ಇಕ್ರಮ್ ರವರ ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.