alex Certify ಹಳೆ ಸ್ಮಾರ್ಟ್​ಫೋನ್ ಮಾರಾಟ ಮಾಡುವ ಮುನ್ನ ನೆನಪಿರಲಿ ಈ ಪ್ರಮುಖ ಅಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ಸ್ಮಾರ್ಟ್​ಫೋನ್ ಮಾರಾಟ ಮಾಡುವ ಮುನ್ನ ನೆನಪಿರಲಿ ಈ ಪ್ರಮುಖ ಅಂಶ

ನೀವು ಹೊಸ ಆಂಡ್ರಾಯ್ಡ್​ ಫೋನ್​ನ್ನು ಖರೀದಿ ಮಾಡಬೇಕೆಂದುಕೊಂಡು ಅದಕ್ಕೂ ಮುನ್ನ ಪ್ರಸ್ತುತ ಇರುವ ಫೋನ್​​ನ್ನು ಮಾರಾಟ ಮಾಡಬೇಕೆಂದುಕೊಂಡಿದ್ದರೆ ಅದರಲ್ಲಿರುವ ಡೇಟಾಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡವುದು ಸಹಜ.ನೀವು ಆಂಡ್ರಾಯ್ಡ್​ ಫೋನ್​ ಮಾರಾಟ ಮಾಡುವ ಮುನ್ನ ನಿಮ್ಮ ಹಳೆಯ ಫೋನ್​ನಲ್ಲಿರುವ ಎಲ್ಲಾ ಡೇಟಾಗಳನ್ನು ಪಡೆಯಲು ನೀವು ಈ ಮಾರ್ಗಗಳನ್ನು ಅನುಸರಿಸಬಹುದಾಗಿದೆ.

ನಿಮ್ಮ ಕಾಂಟ್ಯಾಕ್ಟ್​ ಸಂಖ್ಯೆಗಳನ್ನು ಬ್ಯಾಕಪ್​ ಮಾಡಿಕೊಳ್ಳಿ

ನೀವು ಆಂಡ್ರಾಯ್ಡ್​ ಬಳಕೆದಾರರಾಗಿದ್ದು ಗೂಗಲ್​ ಅಪ್ಲಿಕೇಶನ್​ಗಳನ್ನು ಹೆಚ್ಚಾಗಿ ಬಳಸುತ್ತಿದ್ದರೆ ನೀವು ನಿಮ್ಮ ಕಾಂಟ್ಯಾಕ್ಟ್​​ಗಳನ್ನು ಬಳಕೆ ಮಾಡುವುದನ್ನು ಮರೆಯುವಂತಿಲ್ಲ. ನಿಮ್ಮ ಕಾಂಟ್ಯಾಕ್ಟ್​​ ಜಿಮೇಲ್​ ಜೊತೆಯಲ್ಲಿ ಸಿಂಕ್​ ಆಗಿಲ್ಲ ಎಂದಾದಲ್ಲಿ ನೀವು https://contacts.google.com/. ಮೂಲಕ ಸಿಂಕ್​ ಮಾಡಬಹುದಾಗಿದೆ.

ಫೋಟೋ, ವಿಡಿಯೋಗಳನ್ನು ಉಳಿಸಿಕೊಳ್ಳಲು ಹೀಗೆ ಮಾಡಿ

ಗೂಗಲ್​ ಫೋಟೋಸ್​, ಗೂಗಲ್​ ಡ್ರೈವ್​ ಹಾಗೂ ಮೈಕ್ರೋಸಾಫ್ಟ್​​ ವನ್​ ಡ್ರೈವ್​ ಬಳಕೆ ಮಾಡಿ ನೀವು ಕ್ಲೌಡ್​ ಬ್ಯಾಕಪ್​ ಮಾಡಬಹುದಾಗಿದೆ. ಡ್ರಾಪ್​ಬಾಕ್ಸ್​ ಅಥವಾ ಇತರೆ ಯಾವುದೇ ಕ್ಲೌಡ್​​ ಸರ್ವೀಸ್​ ಮೂಲಕ ಅಥವಾ ನೀವು ಪೆನ್​ಡ್ರೈವ್​ಗಳಿಗೆ ಫೋಟೋ, ವಿಡಿಯೋಗಳನ್ನು ಮೊದಲೇ ಹಾಕಿಟ್ಟುಕೊಳ್ಳುವ ಮೂಲಕ ಫೋಟೋ, ವಿಡಿಯೋಗಳನ್ನು ಉಳಿಸಿಕೊಳ್ಳಬಹುದಾಗಿದೆ.

ಎಲ್ಲಾ ಅಪ್ಲಿಕೇಶನ್​ಗಳಿಂದ ಲಾಗೌಟ್​ ಆಗಿ

ನಿಮ್ಮ ಸ್ಮಾರ್ಟ್​ಫೋನ್​​ನಲ್ಲಿ ನೀವು ಫ್ಯಾಕ್ಟರಿ ರಿಸೆಟ್​ ಕೊಡುವ ಮೂಲಕ ಎಲ್ಲಾ ಡೇಟಾಗಳನ್ನು ನೀವು ಅಳಿಸಿಹಾಕಿಬಿಡಬಹುದು ಆದರೆ ನೀವು ಗೂಗಲ್ ಅಕೌಂಟ್​ನಿಂದ ಲಾಗೌಟ್​ ಆಗಿರುವುದಿಲ್ಲ. ಹೀಗಾಗಿ ಫ್ಯಾಕ್ಟರಿ ರಿಸೆಟ್​ ಕೊಡುವ ಮುನ್ನ ಲಾಗೌಟ್​ ಆಗಲು ಮರೆಯಬೇಡಿ.

ಮೈಕ್ರೋ ಎಸ್​ಡಿ ಕಾರ್ಡ್​ಗಳನ್ನು ತೆಗೆಯಲು ಮರೆಯಬೇಡಿ

ನಿಮ್ಮ ಫೋನ್​ನಲ್ಲಿ ಮೈಕ್ರೋಎಸ್​ಡಿ ಕಾರ್ಡ್​ ಇದ್ದರೆ ಅದನ್ನು ತೆಗೆದು ಹಾಕಲು ಮರೆಯಬೇಡಿ.

ಸಿಮ್​ ಕಾರ್ಡ್​ ತೆಗೆಯಲು ಮರೆಯಬೇಡಿ

ಈ ವಿಚಾರವನ್ನು ವಿಶೇಷವಾಗಿ ಹೇಳಬೇಕಿಲ್ಲ. ಆದರೂ ನಿಮ್ಮ ಸಿಮ್​ ಕಾರ್ಡ್​ನ್ನು ಮೊಬೈಲ್​ ಫೋನ್​ನಿಂದ ತೆಗೆಯಲು ನೀವು ಮರೆಯಬೇಡಿ.

ವಾಟ್ಸಾಪ್​ ಬ್ಯಾಕಪ್​

ಹೊಸ ಫೋನ್​ಗೆ ಶಿಫ್ಟ್​ ಆಗುವ ಮುನ್ನ ನಿಮ್ಮ ಎಲ್ಲಾ ವಾಟ್ಸಾಪ್ ಚಾಟ್​ಗಳು ಅಳಿಸಿಹೋಗಬಾರದು ಎಂಬುದು ನಿಮ್ಮ ಉದ್ದೇಶವಾಗಿದ್ದರೆ ವಾಟ್ಸಾಪ್​ ಸೆಟ್ಟಿಂಗ್ಸ್​​ಗೆ ಹೋಗಿ ಚಾಟ್​ ಬ್ಯಾಕಪ್​ ಕೊಡಿ. ಫೈಲ್​ ಇಟ್ಟುಕೊಳ್ಳಬೇಕೆ ಬೇಡವೇ ಎಂಬುದರ ಬಗ್ಗೆ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದಾದ ಬಳಿಕ ನೀವು ಹೊಸ ಮೊಬೈಲ್​ನಲ್ಲಿ ವಾಟ್ಸಾಪ್​ ಅಳವಡಿಸಿದ ಬಳಿಕ ನಿಮ್ಮ ಚಾಟ್ ಯಾವುದೂ ಅಳಿಸಿ ಹೋಗಿರುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...