alex Certify ಹಳೆ ಮನೆ ಕೆಡವುವಾಗ ಬೆಳ್ಳಿ ನಾಣ್ಯಗಳ ಸುರಿಮಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ಮನೆ ಕೆಡವುವಾಗ ಬೆಳ್ಳಿ ನಾಣ್ಯಗಳ ಸುರಿಮಳೆ…!

ನಟ ಅಜಯ್ ದೇವಗನ್ ಅವರ ರೈಡ್‌ನಲ್ಲಿ ಮನೆಯ ಮೇಲ್ಛಾವಣಿ ಮುರಿದ ತಕ್ಷಣ ನಾಣ್ಯಗಳು ಮಳೆಯಾಗುವುದನ್ನು ನೀವು ನೋಡಿರಬಹುದು, ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಹಳೆ ಮನೆಯ ಗೋಡೆ ಒಡೆದ ತಕ್ಷಣ ಬೆಳ್ಳಿ ನಾಣ್ಯಗಳ ಮಳೆ ಸುರಿಯಲಾರಂಭಿಸಿದೆ. ಅಲ್ಲಿದ್ದ ಜನರು ನಾಣ್ಯಗಳನ್ನು ಹೆಕ್ಕಿಕೊಳ್ಳಲು ಆರಂಭಿಸಿದರು.‌ಇದರಿಂದ ಕೆಡವುವ ಕಾರ್ಯವನ್ನು ನಿಲ್ಲಿಸಬೇಕಾಗಿ ಬಂತು.

ನಗರಸಭೆಯು ಹಳೆ ಮನೆ ಕೆಡವುವ ಕಾರ್ಯದಲ್ಲಿ ನಿರತರಾಗಿದ್ದಾಗ ನಾಣ್ಯದ ವಿಚಾರ ಜನರ ಕಿವಿಗೆ ಬಿದ್ದಿದೆ. ಬೆಳ್ಳಿ ನಾಣ್ಯಗಳನ್ನು ಲೂಟಿ ಮಾಡಲು ದೊಡ್ಡ ಗುಂಪು ಅಲ್ಲಿ ಸೇರಿತ್ತು. ಆದ್ದರಿಂದ, ಬುಲ್ಡೋಜರ್ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಬೇಕಾಯಿತು. ಸದ್ಯಕ್ಕೆ ಪಾಲಿಕೆ ಕಟ್ಟಡ ಕೆಡವುವ ಕಾರ್ಯ ಸ್ಥಗಿತಗೊಳಿಸಿದೆ.

ಮನೆ ಅಧ್ವಾನವಾಗಿದ್ದು, ಮನೆ ಬೇಗ ಬೀಳಬಹುದೆಂಬ ಭಯ ಸ್ಥಳೀಯರಲ್ಲಿ ಮೂಡಿತ್ತು. ಹೀಗಾಗಿ ಮನೆ ಕೆಡವಲು ನಗರಸಭೆ ನಿರ್ಧರಿಸಿತ್ತು.

ಪ್ರಸ್ತುತ ಆಡಳಿತವು ಬೆಳ್ಳಿ ನಾಣ್ಯಗಳನ್ನು ತಮ್ಮ ಬಳಿ ಸುರಕ್ಷಿತವಾಗಿ ಇರಿಸಿದೆ. ಪ್ರತಿ ನಾಣ್ಯವು 10 ಗ್ರಾಂ ಆಗಿದ್ದು, ಮಾರುಕಟ್ಟೆ ಬೆಲೆ ಸುಮಾರು 1000 ರೂ., 160 ಕ್ಕೂ ಹೆಚ್ಚು ಬೆಳ್ಳಿಯ ನಾಣ್ಯಗಳು ಸಂಗ್ರಹವಾಗಿದ್ದು, ಮನೆಯ ಉಳಿದ ಭಾಗಗಳು ಇನ್ನೂ ಕುಸಿಯಲು ಬಾಕಿ ಉಳಿದಿವೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...