ನಿಮ್ಮ ಬಳಿಯೂ ತುಂಬಾ ಹಳೆ ಬಟ್ಟೆಯಿದ್ದರೆ ಈ ಸುದ್ದಿಯನ್ನು ಅವಶ್ಯವಾಗಿ ಓದಿ. ಹಳೆ ಬಟ್ಟೆಯಿಂದ ಹಣ ಗಳಿಸಬಹುದು. ಕೆಲವರು ಖರೀದಿಸಿ ತಂದ ಹೊಸ ಬಟ್ಟೆಯನ್ನು ತುಂಬಾ ದಿನ ಹಾಕಿಕೊಳ್ಳುವುದಿಲ್ಲ. 2-3 ಬಾರಿ ಧರಿಸಿ ಆ ಬಟ್ಟೆಯನ್ನು ಮೂಲೆಗುಂಪು ಮಾಡ್ತಾರೆ. ಇನ್ಮುಂದೆ ಮೂಲೆಯಲ್ಲಿರುವ ಹಳೆ ಬಟ್ಟೆಯನ್ನು ಹೊರಗೆ ತೆಗೆದು ಪರ್ಸ್ ತುಂಬಿಸಿಕೊಳ್ಳಿ.
ನಿಮ್ಮ ಹಳೆ ಬಟ್ಟೆ ಮಾರಾಟ ಮಾಡಿ ನೀವು ಸಾಕಷ್ಟು ಹಣ ಗಳಿಸಬಹುದು. ನೌಕರಿ ಬಿಟ್ಟು ವ್ಯಾಪಾರಕ್ಕಿಳಿದ ಮಹಿಳೆಯೊಬ್ಬಳು ಹಳೆ ಬಟ್ಟೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಲಾಭ ಗಳಿಸ್ತಿದ್ದಾಳೆ. ನಟಾಲಿಯಾ ಗೊಮೆಜ್ ಹೆಸರಿನ ಮಹಿಳೆ ಮೊದಲು ನೌಕರಿ ಮಾಡ್ತಿದ್ದಳಂತೆ. ಕೆಲಸದ ಒತ್ತಡ ಆಕೆ ಕೆಲಸ ಬಿಡುವಂತೆ ಮಾಡ್ತಂತೆ.
ಅನೇಕ ಕಡೆ ಉದ್ಯೋಗ ಅರಸಿ ಹೋಗಿದ್ದ ಮಹಿಳೆಗೆ ಯಾವ ಉದ್ಯೋಗವೂ ಇಷ್ಟವಾಗಿಲ್ಲವಂತೆ. ಈ ಮಧ್ಯೆ ವೆಬ್ ಸೈಟ್ ಒಂದರಲ್ಲಿ ಹಳೆ ಬಟ್ಟೆ ಮಾರಾಟದ ಜಾಹೀರಾತು ನೋಡಿದ್ಲಂತೆ. ಪ್ರಯೋಗವೆಂಬಂತೆ ವೆಬ್ ಸೈಟ್ ಮೂಲಕ ಮೊದಲು ತನ್ನ ಹಳೆ ಬಟ್ಟೆ ಮಾರಾಟ ಮಾಡಿದ್ಲಂತೆ. ಮೊದಲ ದಿನವೇ ಆಕೆ ಬಟ್ಟೆ 2581 ರೂಪಾಯಿಗೆ ಮಾರಾಟವಾಯ್ತಂತೆ.
ಇದ್ರಿಂದ ಉತ್ಸಾಹಿತಳಾದ ಗೊಮೆಜ್ ಮಾರುಕಟ್ಟೆಯಿಂದ ಕೆಲ ಬಟ್ಟೆ ಖರೀದಿ ಮಾಡಿ ಮನೆಯಲ್ಲಿಯೇ ವ್ಯಾಪಾರ ಶುರು ಮಾಡಿದ್ಲಂತೆ. ಒಂದೇ ತಿಂಗಳಲ್ಲಿ ಆಕೆ 6.5 ಲಕ್ಷ ಗಳಿಕೆ ಕಂಡಳಂತೆ. ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಿರುವ ಮಹಿಳೆ ಆನ್ಲೈನ್ ನಲ್ಲಿ ಮಾರಾಟ ಶುರುಮಾಡಿದ್ದಾಳೆ. ಇದ್ರಿಂದ ಹಳೆ ಬಟ್ಟೆ ಮಾರಾಟ ಹೆಚ್ಚಾಗಿದೆ ಎನ್ನುತ್ತಾಳೆ ಗೊಮೆಜ್.
ಅನೇಕ ಕಂಪನಿಗಳು ಬಳಸಿದ ಬಟ್ಟೆ ಮಾರಾಟಕ್ಕೆ ಅವಕಾಶ ನೀಡ್ತಿವೆ. ಹಾಗಂತ ಹರಿದ ಹಳೆ ಬಟ್ಟೆಗಳನ್ನು ನೀವು ಇಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಬ್ರಾಂಡೆಡ್ ಬಟ್ಟೆಗಳಾಗಿರಬೇಕು. ಒಳ್ಳೆ ಬೆಲೆಗೆ ಹೋಗುವಂತಿರಬೇಕು. ನೋಡಲು ಸುಂದರವಾಗಿರುವ ಬಟ್ಟೆಗಳನ್ನು ನೀವು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ಅಂತಹ ಕೆಲ ವೆಬ್ ಸೈಟ್ ಗಳ ಪಟ್ಟಿ ಇಲ್ಲಿದೆ.
https://www.etashee.com/ ನಲ್ಲಿ ನೀವು ಹಳೆ ಬಟ್ಟೆಗಳನ್ನು ಮಾರಾಟ ಮಾಡಬಹುದು. ಇದೊಂದು ಫ್ಯಾಷನ್ ವೆಬ್ಸೈಟ್ ಆಗಿದ್ದು. ಈಗಾಗಲೇ ಅನೇಕ ಗ್ರಾಹಕರನ್ನು ಇದು ಹೊಂದಿದೆ.
https://confidentialcouture.com/ ಇದ್ರಲ್ಲಿ ಹಳೆ ಬಟ್ಟೆ ಮಾತ್ರವಲ್ಲ ಪರ್ಸ್, ಬ್ಯಾಗ್ ಸೇರಿದಂತೆ ಫ್ಯಾಷನ್ ಗೆ ಸಂಬಂಧಿಸಿದ ಹಳೆ ವಸ್ತುಗಳನ್ನು ಮಾರಾಟ ಮಾಡಬಹುದು.