ಹೊಸ ಸ್ಮಾರ್ಟ್ ಫೋನ್ ಖರೀದಿಸುವಾಗ ಹಳೆ ಫೋನ್ ಮಾರಾಟ ಮಾಡೋದು ಕಾಮನ್. ಆದ್ರೆ ಹಳೆ ಫೋನ್ ಖರೀದಿಸಿ ಕೆಲವೇ ದಿನಗಳಾಗಿದ್ದರೂ ಉತ್ತಮ ಡೀಲ್ ಸಿಗೋದಿಲ್ಲ.
ಕಡಿಮೆ ಬೆಲೆಗೆ ಫೋನ್ ಮಾರಾಟ ಮಾಡಬೇಕಾಗುತ್ತೆ. ಆದ್ರೆ ನಿಮ್ಮ ಹಳೆ ಮೊಬೈಲ್ ಗೂ ದಿ ಬೆಸ್ಟ್ ಬೆಲೆ ಪಡೆಯಬಹುದು. ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ.
ಮೊದಲು ನಿಮ್ಮ ಹಳೆ ಫೋನ್ ನ ಒರಿಜಿನಲ್ ಬಾಕ್ಸ್ ತೆಗೆದಿಟ್ಟುಕೊಳ್ಳಿ. ಜೊತೆಗೆ ಆ ಸೆಟ್ ಜೊತೆ ಬಂದಿರುವ ಎಲ್ಲ ಭಾಗಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಪ್ಯಾಕ್ ಚೆನ್ನಾಗಿದ್ದರೆ ಗ್ರಾಹಕರು ಹೆಚ್ಚಿನ ಒಲವು ತೋರಿಸ್ತಾರೆ.
ಇನ್ನು ಫೋನ್ ನೋಡಿದ ತಕ್ಷಣ ಆಕರ್ಷಣೆಯಾಗಬೇಕು. ಹಾಗಾಗಿ ಫೋನ್ ಮೇಲ್ಭಾಗವನ್ನು ಸರಿಯಾಗಿಟ್ಟುಕೊಳ್ಳಿ. ಗ್ಲಾಸ್ ಮೇಲೆ ಗೀರು ಬೀಳದೆ ಇದ್ದರೆ ಗ್ರಾಹಕ ಮತ್ತಷ್ಟು ಇಂಟರೆಸ್ಟ್ ತೋರುತ್ತಾನೆ.
ಆನ್ಲೈನ್ ನಲ್ಲಿ ನಿಮ್ಮ ಫೋನ್ ಮಾರಾಟ ಮಾಡುವುದಾದರೆ ಮೊದಲು ನಿಮ್ಮ ಫೋನ್ ನ ಒಳ್ಳೆಯ ಫೋಟೋಗಳನ್ನು ಅಪ್ ಲೋಡ್ ಮಾಡಿ. ಜೊತೆಗೆ ನಿಮ್ಮ ಫೋನ್ ಬಗ್ಗೆ ನೀವು ಮಾಡುವ ಪ್ರಚಾರ ಆಕರ್ಷಕವಾಗಿರಲಿ.
ಹೊಸ ಮಾಡೆಲ್ ಬರುವ ಮೊದಲೇ ನಿಮ್ಮ ಫೋನ್ ಮಾರಾಟ ಮಾಡಿ. ಆಗ ಇದು ಲೇಟೆಸ್ಟ್ ಮಾಡೆಲ್ ಎಂದು ನೀವು ಇನ್ನಷ್ಟು ಹಣ ಪಡೆಯಬಹುದು.