ಪಿಎಚ್ಡಿ ವಿದ್ಯಾರ್ಥಿನಿ ಹಾಗೂ ಆಕೆಯ ಗೆಳೆಯನನ್ನು ಕೊಲೆ ಪ್ರಕರಣದಲ್ಲಿ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನ 43 ವರ್ಷದ ಸೆಂಥಿಲ್ ಎಂದು ಗುರುತಿಸಲಾಗಿದ್ದು, ಈ ಹಿಂದೆ ಬಂಧಿತೆ ದೇಸಪ್ರಿಯಾ ಹಾಗೂ ಈತನಿಗೆ ಸಂಬಂಧವಿತ್ತು ಎಂದು ತಿಳಿದು ಬಂದಿದೆ.
ಕೆಲದಿನಗಳ ಹಿಂದೆ ಇವರಿಬ್ಬರ ನಡುವಿನ ಸಂಬಂಧ ಅಂತ್ಯವಾಗಿ, ದೇಸಪ್ರಿಯಾ ಪ್ರಕರಣದ ಮತ್ತೊಬ್ಬ ಆರೋಪಿ ಅರುಣ್ ಪಾಂಡಿಯನ್ ಅವರನ್ನ ಪ್ರೀತಿಸುತ್ತಿದ್ದಳು. ಆದರೆ ಮೃತ ಸೆಂಥಿಲ್ ಆಕೆಯನ್ನ ಹಿಂಬಾಲಿಸಿ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಇದರಿಂದ ರೋಸಿ ಹೋಗಿದ್ದ ದೇಸಪ್ರಿಯಾ ತನ್ನ ಗೆಳೆಯನೊಂದಿಗೆ ಸೇರಿ ಹಳೆ ಪ್ರೇಮಿಯನ್ನ ಕೊಂದಿದ್ದಾಳೆ.
ಗುರುವಾರ ಕೋಲಂಬಾಕ್ಕಂನ ಖಾಸಗಿ ಕಾಲೇಜಿನ ಹೊರಗೆ ಸೆಂಥಿಲ್‌ನನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಂಥಿಲ್ ಮತ್ತು ದೇಸಪ್ರಿಯಾ ಪ್ರೇಮಿಗಳಾಗಿದ್ದರು, ಆದರೆ ಲಾಕ್‌ಡೌನ್ ಸಮಯದಲ್ಲಿ ಅವರ ಸಂಬಂಧ ಮುರಿದುಬಿದ್ದಿತ್ತು. ಆದರೂ ಸೆಂಥಿಲ್ ಈಕೆಯನ್ನ ಮದುವೆಯಾಗುವಂತೆ ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೆ ಅವರ ಚಿತ್ರಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್ ಹಾಕಿದ ಆರೋಗ್ಯ ಇಲಾಖೆ
ಸೆಂಥಿಲ್ ಪೆರಂಬಲೂರಿನವರಾಗಿದ್ದು, ಚೆನ್ನೈನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭೌತಶಾಸ್ತ್ರ ಡೆಮಾನ್ಸ್ಟ್ರೇಟರ್ ಆಗಿ ಕಾರ್ಯ ನಿರ್ವಗಿಸುತ್ತಿದ್ದ. 26 ವರ್ಷದ ದೇಸಪ್ರಿಯಾ, ತಿರುವಣ್ಣಾಮಲೈ ಮೂಲದವರಾಗಿದ್ದು, ಹಳೆ ಮಹಾಬಲಿಪುರಂ ರಸ್ತೆಯ (OMR) ಕಳವಕ್ಕಂನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪಿಎಚ್ಡಿ ಓದುತ್ತಿದ್ದರು. ಆಕೆಯ ಗೆಳೆಯ 27 ವರ್ಷದ ಅರುಣ್ ಪಾಂಡಿಯನ್ ಉಲುಂದೂರುಪೇಟೆಯವನು. ಈತ ಕಟ್ಟಂಕುಳತ್ತೂರಿನ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿ ಎಂದು ಹೇಳಲಾಗಿದ.
ಸೆಂಥಿಲ್ ನನ್ನು ಯಾರು ಇಲ್ಕದ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಬೇಕೆಂದು ಇಬ್ಬರು ಪ್ಲ್ಯಾನ್ ಮಾಡಿದ್ದರು. ಪ್ಲ್ಯಾನ್ ಪ್ರಕಾರ ಗುರುವಾರ ಮಧ್ಯಾಹ್ನ 1.30 ರ ಸುಮಾರಿಗೆ ದೇಸಪ್ರಿಯಾ ಸೆಂಥಿಲ್ ಅವರನ್ನು ತನ್ನ ಕಾಲೇಜಿನಲ್ಲಿ ಭೇಟಿಯಾಗುವಂತೆ ಕೇಳಿಕೊಂಡಿದ್ದಾಳೆ, ಇವರಿಬ್ಬರು ಮಾತನಾಡುತ್ತಿದ್ದಾಗ ಅರುಣ್ ಪಾಂಡಿಯನ್ ಕೂಡ ಜೊತೆಗೂಡಿದ್ದಾನೆ.
ನೋಡನೋಡುತ್ತಿದ್ದಂತೆ ಇವರ ಮಾತುಕತೆ ವಾಗ್ವಾದಕ್ಕೆ ತಿರುಗಿ ಆಕ್ರೋಶದಲ್ಲಿದ್ದ ದೇಸಪ್ರಿಯಾ ಮತ್ತು ಅರುಣ್ ಪಾಂಡಿಯನ್ ಸೆಂಥಿಲ್, ಕತ್ತು ಸೀಳಿ ಹಲವಾರು ಬಾರಿ ಇರಿದಿದ್ದಾರೆ. ಘಟನೆ ನಂತರ ದೇಸಪ್ರಿಯ ಮತ್ತು ಪಾಂಡಿಯನ್ ಓಡಿಹೋಗಲು ಪ್ರಯತ್ನಿಸಿದರು ಆದರೆ ಜನರು ತಪ್ಪಿಸಿಕೊಳ್ಳದಂತೆ ತಡೆದು, ನಂತರ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈಗಾಗಲೇ ಸೆಂಥಿಲ್ ಮದುವೆಯಾಗಿದ್ದು, ಆತನ ಪತ್ನಿ ತವರು ಮನೆಯಲ್ಲಿದ್ದಾಳೆ. ಮದುವೆಯಾಗಿ ಏಳು ವರ್ಷ ಕಳೆದರೂ ದಂಪತಿಗೆ ಮಕ್ಕಳಾಗದ ಕಾರಣ ಪತ್ನಿಯನ್ನು ಒಪ್ಪಿಸಿ, ದೇಸಪ್ರಿಯಾಳನ್ನು ಮದುವೆಯಾಗುವುದಾಗಿ ಸೆಂಥಿಲ್ ಹೇಳಿದ್ದ ಎಂದು ಪೊಲೀಸರ ಆರಂಭಿಕ ತನಿಖೆಯಲ್ಲಿ ಬಯಲಾಗಿದೆ.