ದಿನಪತ್ರಿಕೆ ಹಾಗೂ ವಾರಪತ್ರಿಕೆ ಓದಿದ ಮೇಲೆ ಅದನ್ನು ರದ್ದಿಗೆ ಹಾಕುವವರೇ ಹೆಚ್ಚು. ಆದರೆ ಇದರಿಂದಲೂ ಆದಾಯ ಗಳಿಸಬಹುದು ಗೊತ್ತೇ ?
ಕಡಿಮೆ ಬಂಡವಾಳ, ಹೆಚ್ಚು ಲಾಭ ಗಳಿಸಬಹುದಾದ ಪೇಪರ್ ಕವರ್ ಗಳಿಗೆ ಯಾವಾಗಲೂ ಬೇಡಿಕೆ ಇದ್ದೆ ಇರುತ್ತದೆ. ಪ್ಲಾಸ್ಟಿಕ್ ಮುಕ್ತ ಪರಿಸರದ ಕೂಗು ಎಲ್ಲೆಡೆ ಕೇಳಿ ಬರುವಾಗ ದಿನ ಬಳಕೆಯ ಹಾಲು, ಹಣ್ಣು, ತರಕಾರಿ, ಔಷಧಿ ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಈ ಪೇಪರ್ ಕವರ್ ಮಾಡಿ ಕೊಡಿ.
4-5 ಚಮಚ ಮೈದಾ ಹಿಟ್ಟಿನಿಂದ ಸ್ವತಃ ಮನೆಯಲ್ಲಿ ನೀವೇ ಗಮ್(ಗೊಂದು) ತಯಾರಿಸಬಹುದು. ಈಗಾಗಲೇ ಓದಿ ಮುಗಿಸಿರುವ ಪತ್ರಿಕೆಗಳಿಂದ ಸುಲಭವಾಗಿ ಕಡಿಮೆ ಸಮಯದಲ್ಲಿ ಪೇಪರ್ ಕವರ್ ತಯಾರಿಸಿ, ನಿಮ್ಮ ಮನೆಯ ಹತ್ತಿರವಿರುವ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಕೊಡಿ. ಕಡಿಮೆ ಎಂದರೂ ದಿನಕ್ಕೆ ನೂರರಿಂದ ಇನ್ನೂರು ರೂಪಾಯಿ ಮನೆಯಲ್ಲೇ ಕುಳಿತು ಸಂಪಾದನೆ ಮಾಡಬಹುದು.
ಇದನ್ನೇ ಮುಂದುವರೆಸಿ ನೀವು ಪೇಪರ್ ಬ್ಯಾಗ್ ತಯಾರು ಮಾಡಿ ಮತ್ತಷ್ಟು ದೊಡ್ಡ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಕವರ್ ಪರ್ಯಾಯವಾಗಿ ಪೇಪರ್ ಬ್ಯಾಗ್ ಹಾಗೂ ಪೇಪರ್ ಕವರ್ ಗಳಿಂದ ಅತಿ ಹೆಚ್ಚು ಲಾಭ ಗಳಿಸುವ ಪ್ರಯತ್ನ ಮಾಡಬಹುದು.