ಹಳೆಯ ಹಾಗೂ ಟೈಟ್ ಆದ ಜೀನ್ಸ್ ಅನೇಕರ ಬಳಿ ಇರುತ್ತೆ. ಅದನ್ನು ಮತ್ತೆ ಹಾಕಿಕೊಳ್ಳಲು ಸಾಧ್ಯವಿಲ್ಲ. ಹಾಗಂತ ಕಸಕ್ಕೆ ಎಸೆಯಲೂ ಮನಸ್ಸು ಬರುವುದಿಲ್ಲ. ಜೀನ್ಸ್ ಎಸೆಯುವ ಬದಲು ಬೇರೆ ಕೆಲಸಕ್ಕೆ ಅದನ್ನು ಉಪಯೋಗಿಸಬಹುದು. ಹಳೆ ಜೀನ್ಸ್ ಗೆ ಹೊಸ ರೂಪ ಕೊಡಬಹುದು.
ಹಳೆ ಜೀನ್ಸ್ ನಲ್ಲಿ ಟೇಬಲ್ ಮ್ಯಾಟ್ ಮಾಡಬಹುದು. ಇದನ್ನು ಡೈನಿಂಗ್ ಟೇಬಲ್ ನಲ್ಲಿ ಹೆಚ್ಚಾಗಿ ಬಳಸ್ತಾರೆ. ದುಬಾರಿ ಟೇಬಲ್ ಮ್ಯಾಟ್ ಗಳನ್ನು ಮಾರುಕಟ್ಟೆಯಿಂದ ಕೊಂಡು ತರುವ ಬದಲು ಹಳೆ ಜೀನ್ಸ್ ನಲ್ಲಿ ಮ್ಯಾಟ್ ಮಾಡಿದ್ರೆ ಖುಷಿ ದುಪ್ಪಟ್ಟಾಗುತ್ತದೆ. ಹಣ ಉಳಿಯುತ್ತದೆ.
ಕುಶನ್ ಕವರ್ ಗೂ ಜೀನ್ಸ್ ಬಳಸಬಹುದು. ಎಲ್ಲರ ಮನೆಯಲ್ಲಿಯೂ ದಿಂಬು ಇದ್ದೇ ಇರುತ್ತೆ. ಹಾಸಿಗೆ ಹಾಗೂ ಸೋಫಾ ಎರಡಕ್ಕೂ ದಿಂಬನ್ನು ಬಳಸ್ತಾರೆ. ಈ ದಿಂಬಿಗೆ ಹಳೇ ಜೀನ್ಸ್ ನಿಂದ ಕವರ್ ತಯಾರಿಸಿ ಹಾಕಿದ್ರೆ ಉಳಿತಾಯದ ಜೊತೆ ಸೋಫಾ ಲುಕ್ ಬದಲಾಗುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ಜೀನ್ಸ್ ಬ್ಯಾಗ್ ದುಬಾರಿಯಾಗಿರುತ್ತದೆ. ಮನೆಯಲ್ಲಿಯೇ ಹಳೇ ಜೀನ್ಸ್ ಬಳಸಿ ಬ್ಯಾಗ್ ತಯಾರಿಸಿ. ಬ್ಯಾಗ್ ತಯಾರಿಸುವ ಬಗ್ಗೆ ಮಾಹಿತಿ ಯೂಟ್ಯೂಬ್ ನಲ್ಲಿ ಸುಲಭವಾಗಿ ಸಿಗುತ್ತದೆ.
ಹಳೆ ಜೀನ್ಸ್ ನಲ್ಲಿ ಬೆಡ್ ಶೀಟ್ ಕೂಡ ತಯಾರಿಸಬಹುದು. ಆದ್ರೆ ಇದಕ್ಕೆ ತುಂಬಾ ಜೀನ್ಸ್ ಬೇಕು. ಹಳೆಯ ಜೀನ್ಸ್ ಸಂಖ್ಯೆ ಜಾಸ್ತಿ ಇದಲ್ಲಿ ನಿಮಗೆ ಬೇಕಾಗುವಷ್ಟ ದೊಡ್ಡದಾದ, ಉದ್ದವಾದ ಬೆಡ್ ಶೀಟ್ ರೆಡಿ ಮಾಡಬಹುದು.
ಹಳೆ ಪಾದರಕ್ಷೆಗಳಿಗೆ ಹಳೆ ಜೀನ್ಸ್ ಹೊಸ ಲುಕ್ ನೀಡುತ್ತದೆ. ಜೀನ್ಸ್ ಮೇಲ್ಭಾಗವನ್ನು ಕತ್ತರಿಸಿ ನಿಮ್ಮ ಪಾದರಕ್ಷೆಗಳಿಗೆ ಹಚ್ಚಬೇಕು. ಇದು ನಿಮ್ಮ ಹಾಳಾದ ಪಾದರಕ್ಷೆ ಸೌಂದರ್ಯವನ್ನು ಮತ್ತೆ ಹೆಚ್ಚಿಸುತ್ತದೆ.