ಪ್ರಯಾಣಿಕರೊಬ್ಬರ ಐಫೋನ್ ಅನ್ನು ಹುಡುಕಲು ಆರ್‌ಪಿಎಫ್ ಕಾನ್ಸ್ಟೇಬಲ್ ರೈಲ್ವೆ ಹಳಿಗಳ ಮೇಲೆ 5 ಕಿ.ಮೀ. ನಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕುರ್ಲಾದಿಂದ ಮೊಹಮ್ಮದ್ ಖುರೇಷಿಯ ಫೋನ್ ಅನ್ನು ಪಡೆಯಲು ಪೊಲೀಸರು ಸಫಲೆ ಮತ್ತು ವೈತರ್ನಾ ನಡುವೆ ನಡೆದಿದ್ದಾರೆ. ಖುರೇಷಿ ಡೆಹ್ರಾಡೂನ್ ಎಕ್ಸ್ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಚಾರ್ಜಿಂಗ್‌ಗಾಗಿ ಇರಿಸಲಾಗಿದ್ದ ಅವರ ಫೋನ್ ಅನ್ನು ಮಕ್ಕಳು ಸಫಲೆಯಲ್ಲಿ ಆಕಸ್ಮಿಕವಾಗಿ ಹೊರಗೆ ತಳ್ಳಿದ್ದರು.
75,000 ರೂ.ಗೆ ಖರೀದಿಸಿದ್ದ ಫೋನ್‌ಗೆ ಖುರೇಷಿ 5,000 ರೂ.ಗಳ ಇಎಂಐ ಪಾವತಿಸುತ್ತಿದ್ದರು. ಆತ ತನ್ನ ಸೋದರ ಸಂಬಂಧಿ ಜೊತೆ ಮುಂದಿನ ನಿಲ್ದಾಣವಾದ ವಿರಾರ್‌ನಲ್ಲಿ ಇಳಿದು ಸಫಲೆ ತನಕ 15 ಕಿ.ಮೀ ನಡೆದಿದ್ದಾರೆ. ಆದರೂ ಅವರಿಗೆ ಫೋನ್ ಮಾತ್ರ ಸಿಗಲೇ ಇಲ್ಲ.
ಖುರೇಷಿಯನ್ನು ನೋಡಿದ ಕಾನ್‌ಸ್ಟೇಬಲ್ ರಾಮ್‌ಧನ್ ಮೀನಾ ವಿಷಯ ಏನೆಂದು ಕೇಳಿದ್ದಾರೆ. ಫೋನ್ ಬಗ್ಗೆ ಕೇಳಿದ ನಂತರ, ಮೀನಾ ಹಳಿಗಳ ಮೇಲೆ ಗಸ್ತು ತಿರುಗಿದ್ದಾರೆ, ಕೊನೆಗೆ ಇವರ ಕೈಗೆ ಫೋನ್ ಸಿಕ್ಕಿದೆ. ನಂತರ ಫೋನ್ ಮಾಲೀಕ ಖುರೇಷಿಗೆ ಹಿಂದಿರುಗಿಸಲಾಗಿದೆ. ಮೀನಾ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದ ತಿಂಗಳು ಮಹಾರಾಷ್ಟ್ರದ ರೈಲ್ವೇ ಕಾನ್‌ಸ್ಟೇಬಲ್ ಒಬ್ಬರು ರೈಲಿನ ಮುಂದೆ ಹಾರಿದ್ದ ಬಾಲಕನ ಪ್ರಾಣ ಉಳಿಸಿದ್ದರು. ಮಾರ್ಚ್ 23 ರಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಠ್ಠಲವಾಡಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು.