ಹಿಂದೂ ಧರ್ಮದಲ್ಲಿ ಬಣ್ಣಕ್ಕೂ, ಶಕುನಕ್ಕೂ ಸಂಬಂಧವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಬಣ್ಣಕ್ಕೂ ಅದ್ರದೇ ಆದ ಮಹತ್ವ, ಪ್ರಾಮುಖ್ಯತೆಯಿರುತ್ತದೆ. ವಾರದಲ್ಲಿ ಏಳು ದಿನ ಏಳು ದೇವತೆಗಳ ಆಧಾರದ ಮೇಲೆ ಬಣ್ಣಕ್ಕೆ ಶುಭ-ಅಶುಭ ಸ್ಥಾನ ನೀಡಲಾಗಿದೆ.
ಶಾಸ್ತ್ರಗಳ ಪ್ರಕಾರ, ಗುರುವಾರ ಹಳದಿ ಬಣ್ಣ ಶ್ರೇಷ್ಠ. ಗುರುವಾರ ಹಳದಿ ಬಟ್ಟೆ ಧರಿಸಿದ ಹುಡುಗಿ ಕಣ್ಣ ಮುಂದೆ ಬಂದ್ರೆ ಶೀಘ್ರವೇ ಜೀವನದಲ್ಲಿ ಧನಪ್ರಾಪ್ತಿಯಾಗಲಿದೆ ಎಂದರ್ಥ.
ಇನ್ನು ಶುಕ್ರವಾರದ ದಿನ ಅಂಗೈ ತುರಿಸಿದ್ರೆ ಹಣ ಪ್ರಾಪ್ತಿಯಾಗಲಿದೆ ಎಂದರ್ಥ. ಆದಷ್ಟು ಬೇಗ ಆರ್ಥಿಕ ಸಮಸ್ಯೆ ದೂರವಾಗಿ ಧನ ಲಾಭವಾಗುತ್ತದೆ ಎಂಬುದರ ಸಂಕೇತವಂತೆ.
ಹಣದ ವ್ಯವಹಾರ ನಡೆಸುವ ವೇಳೆ ಕೈನಿಂದ ಹಣ ಕೆಳಗೆ ಬಿದ್ರೆ ಶುಭ ಸಂಕೇತ. ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ಧನ ಲಾಭವಾಗಲಿದೆ ಎಂದರ್ಥ.
ಶಾಸ್ತ್ರದ ಪ್ರಕಾರ, ಕನ್ಯೆಯನ್ನು ಶುಭ ಮುಹೂರ್ತದಲ್ಲಿ, ಹಳದಿ ಬಟ್ಟೆಯಲ್ಲಿ ನೋಡಿದ್ರೂ ಧನ ಪ್ರಾಪ್ತಿಯಾಗಲಿದೆ. ಇದು ಸಂಪತ್ತು ವೃದ್ಧಿಯ ಸಂಕೇತ ನೀಡುತ್ತದೆ.
ರಸ್ತೆಯಲ್ಲಿ ಮುಂಗುಸಿ ಕಾಣಿಸಿಕೊಂಡ್ರೆ ಅಥವಾ ರಸ್ತೆ ದಾಟಿದ್ರೆ ಶುಭ ಸಂಕೇತ. ಇದು ಕೂಡ ಹಣ ಪ್ರಾಪ್ತಿಯ ಸೂಚನೆ.