ಎಷ್ಟೋ ಜನರು ದೇಹದ ಎಲ್ಲಾ ಭಾಗಗಳ ಸೌಂದರ್ಯದ ಬಗ್ಗೆ ಗಮನ ಕೊಡ್ತಾರೆ. ಆದ್ರೆ ಹಲ್ಲುಗಳ ರಕ್ಷಣೆ ಮತ್ತು ಸೌಂದರ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮುಖ ಸುಂದರವಾಗಿದ್ದು, ಹಲ್ಲುಗಳೇ ಹಳದಿಯಾಗಿದ್ದರೆ ಅದು ಅಸಹ್ಯವೆನಿಸುತ್ತದೆ.
ಹಾಗಾಗಿ ಹಲ್ಲುಗಳು ಹಳದಿ ಅಥವಾ ಕಪ್ಪು ಬಣ್ಣಕ್ಕೆ ತಿರುಗದಂತೆ ಕಾಳಜಿ ವಹಿಸಬೇಕು. ಪ್ರತಿದಿನ ಬ್ರಷ್‌ನಿಂದ ಸ್ವಚ್ಛಗೊಳಿಸಿದರೂ ಕೆಲವೊಮ್ಮೆ ಹಲ್ಲುಗಳು ಬಿಳಿಯಾಗುವುದಿಲ್ಲ ಹಾಗಾಗಿ ಕೆಲವು ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ.
ಶುಂಠಿ : ಮಿಕ್ಸರ್ ಅಥವಾ ಕುಟ್ಟಾಣಿಯಲ್ಲಿ ಶುಂಠಿಯನ್ನು ಪುಡಿ ಮಾಡಿಕೊಳ್ಳಿ. ಅದಕ್ಕೆ ಕಾಲು ಟೀ ಚಮಚ ಉಪ್ಪು ಹಾಗೂ ನಿಂಬೆ ರಸವನ್ನ ಬೆರೆಸಿ. ಆ ಮಿಶ್ರಣವನ್ನು ಹಲ್ಲುಜ್ಜುವ ಬ್ರಷ್‌ಗೆ ಹಾಕಿಕೊಂಡು ಚೆನ್ನಾಗಿ ಬ್ರಷ್ ಮಾಡಿ.
ಬೇವಿನ ಎಲೆ : ಬೇವಿನ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅದರ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ. ನಂತರ ನೀರನ್ನು ಫಿಲ್ಟರ್ ಮಾಡಿ ಮತ್ತು ಅದು ತಣ್ಣಗಾಗುವವರೆಗೆ ಕಾಯಿರಿ. ಆ ನೀರಿನಿಂದ ಗಾರ್ಗಲ್ ಮಾಡಿ. ಬೇವಿನ ಕಹಿ ಅಂಶವು ಬಾಯಿ ಮತ್ತು ಹಲ್ಲುಗಳಲ್ಲಿ ಇರುವ ಸೂಕ್ಷ್ಮಾಣುಗಳನ್ನು ಕೊಲ್ಲುತ್ತದೆ.
ಎಪ್ಸಮ್ ಸಾಲ್ಟ್ : ಎಪ್ಸಮ್ ಉಪ್ಪನ್ನು ಮೆಗ್ನೀಸಿಯಮ್ ಸಲ್ಫೇಟ್ ಎಂದೂ ಕರೆಯುತ್ತಾರೆ. ಈ ಉಪ್ಪು ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಮಿಶ್ರಣವನ್ನು ಹಲ್ಲುಜ್ಜುವ ಬ್ರಷ್‌ನಿಂದ ನಿಮ್ಮ ಹಲ್ಲುಗಳ ಮೇಲೆ ಉಜ್ಜಿಕೊಳ್ಳಿ. ನಂತರ ಬಾಯಿಯನ್ನು ಸ್ವಚ್ಛವಾಗಿ ತೊಳೆಯಿರಿ.
ಕೋಕೋ ಪೌಡರ್ : ಕೋಕೋ ಪೌಡರ್ ಅನ್ನು ನೀರು ಅಥವಾ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ನಂತರ ಅದನ್ನು ಬ್ರಷ್‌ಗೆ ಹಾಕಿಕೊಂಡು ಹಲ್ಲುಜ್ಜಿ. ಈ ಮಿಶ್ರಣದ ಬಳಕೆಯಿಂದ ಹಲ್ಲುಗಳ ಹೊಳಪು ಮತ್ತೆ ಮರಳಿ ಬರುತ್ತದೆ.
ಪುದೀನಾ ಎಲೆ : ಪುದೀನಾ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. 3-4 ಪುದೀನಾ ಎಲೆಗಳನ್ನು ಚೆನ್ನಾಗಿ ಜಜ್ಜಿ ತೆಂಗಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಮಿಶ್ರಣವನ್ನು ಹಲ್ಲುಜ್ಜುವ ಬ್ರಷ್ ಮೇಲೆ ಹಾಕಿಕೊಂಡು ಅದರಿಂದ ಬ್ರಷ್ ಮಾಡಿ. ಹೀಗೆ ಮಾಡುವುದರಿಂದಲೂ ಹಲ್ಲುಗಳು ಬೆಳ್ಳಗೆ ಹೊಳೆಯುತ್ತವೆ.