ಎಷ್ಟೋ ಬಾರಿ ಆಪರೇಶನ್ ಬಳಿಕ ವೈದ್ಯರು ರೋಗಿಯ ಹೊಟ್ಟೆಯಲ್ಲಿ ಬಟ್ಟೆಯ ತುಂಡನ್ನೋ, ಕತ್ತರಿಯನ್ನೋ ಹಾಗೇ ಬಿಟ್ಟು ಹೊಲಿಗೆ ಹಾಕಿರೋ ಪ್ರಕರಣಗಳು ನಡೆದಿವೆ. ಆದ್ರೆ ಇಲ್ಲೊಬ್ಬ ರೋಗಿ ಹಲ್ಲು ಸ್ವಚ್ಛ ಮಾಡುವ ಉಪಕರಣವನ್ನೇ ನುಂಗಿ ಬಿಟ್ಟಿದ್ದಾನೆ. ಅಮೆರಿಕದಲ್ಲಿ ನಡೆದಿರೋ ವಿಚಿತ್ರ ಘಟನೆ ಇದು.
ಟಾಮ್ ಜೋಝೀ ಎಂಬಾತ ದಂತ ವೈದ್ಯರ ಬಳಿ ರೆಗ್ಯುಲರ್ ಚೆಕಪ್‌ಗಾಗಿ ಹೋಗಿದ್ದ. ಹಲ್ಲಿನ ಕುಳಿಯನ್ನು ಫಿಲ್ ಮಾಡುವ ಸಲುವಾಗಿ ವೈದ್ಯರು ಅದನ್ನು ಸ್ವಚ್ಛ ಮಾಡುತ್ತಿದ್ರು. ಈ ವೇಳೆ 60 ವರ್ಷದ ರೋಗಿ ಡ್ರಿಲ್ ಬಿಟ್ ಎಂಬ ಆ ಉಪಕರಣವನ್ನೇ ಆಕಸ್ಮಿಕವಾಗಿ ನುಂಗಿಬಿಟ್ಟಿದ್ದಾನೆ. ಈ ಸಾಧನ ಸುಮಾರು ಒಂದು ಇಂಚು ಉದ್ದವಾಗಿತ್ತು.
ಹಲ್ಲನ್ನು ಸ್ವಚ್ಛ ಮಾಡುತ್ತಿರುವಾಗ್ಲೇ ಈ ಘಟನೆ ನಡೆದಿದ್ದರಿಂದ ತಾನು ಉಪಕರಣ ನುಂಗಿದ್ದೇನೆ ಅನ್ನೋದು ಜೋಜ್ಸಿ ಗಮನಕ್ಕೆ ಬಂದಿರಲಿಲ್ಲ. ಆ ಸಮಯದಲ್ಲಿ ಜೋಜ್ಸಿಗೆ ಜೋರಾಗಿ ಕೆಮ್ಮು ಬಂದಿತ್ತು. ಆದ್ರೆ ಡ್ರಿಲ್ ಬಿಟ್ ರೋಗಿಯ ಹೊಟ್ಟೆ ಸೇರಿದೆ ಅನ್ನೋದು ವೈದ್ಯರಿಗೆ ಅರಿವಾಗಿತ್ತು. ಕೂಡಲೇ ಅವರು ಸಿಟಿ ಸ್ಕ್ಯಾನ್ ಮಾಡಿ ಪರಿಶೀಲಿಸಿದ್ದಾರೆ.
ಜೋರಾಗಿ ಉಸಿರಾಡಿದಾಗ ಡ್ರಿಲ್ ಬಿಟ್ ಶ್ವಾಸಕೋಶದ ಮೂಲಕ ಒಳಕ್ಕೆ ಹೋಗಿದೆ. ಸಾಮಾನ್ಯ ಸ್ಕ್ಯಾನ್‌ನಲ್ಲಿ ಅದನ್ನು ಪತ್ತೆ ಮಾಡುವುದು ಸಾಧ್ಯವಿರಲಿಲ್ಲ. ಹಾಗಾಗಿ ಸಿಟಿ ಸ್ಕ್ಯಾನ್ ಮಾಡಿದ್ದು, ಶ್ವಾಸಕೋಶದ ಬಲಭಾಗದಲ್ಲಿ ಉಪಕರಣ ಪತ್ತೆಯಾಗಿದೆ.