ಖಾರ ಅಥವಾ ಸಿಹಿ ಪದಾರ್ಥವನ್ನು ಹೆಚ್ಚಾಗಿ ಸೇವಿಸಿದಾಗ ಅದು ಹಲ್ಲಲ್ಲೇ ಉಳಿದುಕೊಂಡು ಹಲ್ಲುನೋವು ಕಾಣಿಸುತ್ತದೆ. ಅದನ್ನು ಪರಿಹರಿಸಲು ಹೀಗೆ ಮಾಡಿ.
2 ರಿಂದ 3 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ. ಇದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ನೋವಿರುವ ಜಾಗದಲ್ಲಿ ಇಟ್ಟುಕೊಳ್ಳಿ, ಇದರಿಂದ ಹಲ್ಲುನೋವು ಗುಣವಾಗುತ್ತದೆ.
ನಾಲ್ಕೈದು ಹನಿ ನಿಂಬೆರಸಕ್ಕೆ ಇಂಗು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನೋವಿರುವ ಜಾಗದಲ್ಲಿ ಹಚ್ಚಿ.
ಕಾಳುಮೆಣಸು ಪುಡಿಗೆ ಸ್ವಲ್ಪ ಉಪ್ಪನ್ನು ಸೇರಿಸಿ, ನೀರು ಸಿಂಪಡಿಸಿ ಸಣ್ಣ ಉಂಡೆ ಮಾಡಿ ಹಲ್ಲುನೋವು ಇರುವ ಜಾಗಕ್ಕೆ ಇಡಿ, ಇದರಿಂದ ನೋವು ಕಡಿಮೆ ಆಗುತ್ತದೆ.
5 ಲವಂಗ, ಸ್ವಲ್ಪ ಚೆಕ್ಕೆಯ ತುಂಡು, ಏಲಕ್ಕಿ ಸಿಪ್ಪೆ ಸಮೇತ ಕುಟ್ಟಿ ಪುಡಿ ಮಾಡಿ. ಸ್ವಲ್ಪ ಎಳ್ಳೆಣ್ಣೆಯನ್ನು ಬಿಸಿ ಮಾಡಿ ಒಣಶುಂಠಿಯ ಪುಡಿ, ಇಂಗು ಸೇರಿಸಿ. ಎಣ್ಣೆ ಸ್ವಲ್ಪ ತಣ್ಣಗಾದ ಮೇಲೆ ಸೋಸಿ ಶೇಖರಿಸಿಡಿ. ಹತ್ತಿಯಲ್ಲಿ ಅದ್ದಿ ಹಲ್ಲುನೋವು ಇರುವ ಜಾಗದಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಹಲ್ಲುನೋವು ಗುಣವಾಗುತ್ತದೆ.