ಈ ಸಮಯದಲ್ಲಿ ಅದರಲ್ಲೂ ಕೊರೋನಾ ಭೀತಿ ಸಂಪೂರ್ಣವಾಗಿ ದೂರವಾಗದ ಹೊತ್ತಿನಲ್ಲಿ ಹಲ್ಲು ನೋವು ಕಾಣಿಸಿಕೊಂಡರೆ ಮನಸ್ಸಿನೊಳಗೂ ಒದ್ದಾಟ ಆರಂಭವಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ಮನೆಯಲ್ಲೇ ಕೆಲವು ಮದ್ದುಗಳಿವೆ.
ನಿಮಗೆಲ್ಲಾ ತಿಳಿದಿರುವಂತೆ ಹಲ್ಲು ನೋವಿಗೆ ಉಪ್ಪು ನೀರು ಅತ್ಯುತ್ತಮ ಮದ್ದು. ಉಗುರು ಬೆಚ್ಚಗಿನ ನೀರಿಗೆ ಎರಡು ಚಮಚ ಉಪ್ಪು ಹಾಕಿ ಸರಿಯಾಗಿ ಬಾಯಿ ಮುಕ್ಕಳಿಸಿ.
ಎಕ್ಕ ಗಿಡದ ಹಾಲಿಗೆ ಉಪ್ಪು ಬೆರೆಸಿ ನೋವಿರುವ ಹಲ್ಲಿನ ಜಾಗಕ್ಕೆ ಹಚ್ಚಿದರೆ ಈ ನೋವು ಮಾಯವಾಗುತ್ತದೆ. ಹತ್ತಿ ತುಂಡಿಗೆ ಲವಂಗದ ಎಣ್ಣೆ ಹಾಗೂ ತೇಯ್ದ ಗಂಧ ಲೇಪಿಸಿ ಹಚ್ಚಿಕೊಂಡರೂ ನೋವು ದೂರವಾಗುತ್ತದೆ. ಪೇರಳೆ ಗಿಡದ ಚಿಗುರಿನ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ನೋವು ಕಡಿಮೆಯಾಗುತ್ತದೆ.
ತುಳಸಿ ಎಲೆಯನ್ನು ಕಾಳು ಮೆಣಸಿನ ಜೊತೆ ಅರೆದು ಹಲ್ಲಿನ ನೋವಿದ್ದಲ್ಲಿ ಇಟ್ಟುಕೊಂಡರೆ ಐದು ನಿಮಿಷದಲ್ಲಿ ನೋವು ಇಲ್ಲವಾಗುತ್ತದೆ. ಇಂಗನ್ನು ನೋವಿರುವ ಹಲ್ಲಿನ ಜಾಗಕ್ಕೆ ಇಟ್ಟುಕೊಂಡರೂ ನೋವು ಕಡಿಮೆಯಾಗುತ್ತದೆ.