alex Certify ಹಲ್ಲುಗಳನ್ನು ಬೆಳ್ಳಗಾಗಿಸುತ್ತದೆ ಈ ವಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲುಗಳನ್ನು ಬೆಳ್ಳಗಾಗಿಸುತ್ತದೆ ಈ ವಸ್ತು

ನಕ್ಕಾಗ ಹಲ್ಲು ಮುತ್ತಿನಂತೆ ಹೊಳೆಯುತ್ತಿದ್ದರೆ ಆ ನಗು ನೋಡುಗರಿಗೆ ಮತ್ತಷ್ಟು ಆಕರ್ಷಕ ಅನಿಸುತ್ತದೆ. ಮುತ್ತಿನಂಥ ಹಲ್ಲುಗಳಿಗೆ ದಂತ ವೈದ್ಯರನ್ನು ಭೇಟಿಯಾಗಬೇಕಾಗಿಲ್ಲ. ಈ ಸರಳ ವಿಧಾನ ಅನುಸರಿಸಿದರೆ ಸಾಕು ಸುಂದರ ಹಲ್ಲುಗಳು ನಿಮ್ಮದಾಗುವುದು.

ತೆಂಗಿನೆಣ್ಣೆ
ಒಂದು ಚಮಚ ತೆಂಗಿನೆಣ್ಣೆ ಬಾಯಿಗೆ ಹಾಕಿ 5 ನಿಮಿಷ ಬಾಯಿ ಮುಕ್ಕಳಿಸಬೇಕು. ಈ ರೀತಿ ಮಾಡಿದರೆ ಹಲ್ಲು ಬೆಳ್ಳಗಾಗುವುದರ ಜೊತೆಗೆ ಬಾಯಿ ದುರ್ವಾಸನೆ ಇಲ್ಲವಾಗುತ್ತದೆ.

ಆ್ಯಪಲ್ ಸಿಡರ್‌ ವಿನೆಗರ್
ಸ್ವಲ್ಪ ಆ್ಯಪಲ್ ಸಿಡರ್‌ ವಿನೆಗರ್ ಅನ್ನು ಬ್ರಷ್‌ಗೆ ಹಾಕಿ ಹಲ್ಲು ತಿಕ್ಕಿ. ಈ ರೀತಿ ಮಾಡಿದರೆ ಹಲ್ಲು ಆಕರ್ಷಕವಾಗಿ ಕಾಣುತ್ತದೆ.

ನಿಂಬೆಹಣ್ಣಿನ ಸಿಪ್ಪೆ
ನಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ತಿಕ್ಕಿದರೆ ಹಲ್ಲು ಬೆಳ್ಳಗಾಗುತ್ತದೆ.

ಸ್ಟ್ರಾಬೆರಿ
ಹಲ್ಲು ಹಳದಿ ಬಣ್ಣದಲ್ಲಿದ್ದರೆ, ಸ್ಟ್ರಾಬೆರಿಯಿಂದ ತಿಕ್ಕಿದರೆ ಬಿಳುಪು ಹಲ್ಲು ನಿಮ್ಮದಾಗುತ್ತದೆ.

ಅಡುಗೆ ಸೋಡಾ
ಸ್ವಲ್ಪ ಅಡುಗೆ ಸೋಡಾವನ್ನು ನೀರಿನಲ್ಲಿ ಹಾಕಿ ಕಲಸಿ ಬ್ರೆಷ್‌ಗೆ ಹಾಕಿ ಹಲ್ಲುಜ್ಜಿದರೆ ಹಲ್ಲು ಬೆಳ್ಳಗಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...