ವಯಸ್ಸಾಗುವ ತನಕ ಹಲ್ಲುಗಳ ಆರೈಕೆ ಮಾಡಿ, ಅವುಗಳ ಆರೋಗ್ಯ ಕಾಪಾಡುವುದು ಬಹಳ ಮುಖ್ಯ. ಹಲ್ಲು ನೋವಿನ ಸಮಸ್ಯೆಗೆ ಬೈ ಹೇಳಿ ನಿಮ್ಮ ಹಲ್ಲುಗಳನ್ನು ಹೇಗೆ ಗಟ್ಟಿ ಮಾಡಬಹುದು ಗೊತ್ತೇ?
ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಸೇರಿರುವ ಆಹಾರಗಳನ್ನು ನಿತ್ಯ ಸೇವಿಸುವ ಮೂಲಕ ನಿಮ್ಮ ಹಲ್ಲುಗಳನ್ನು ಸಹಜವಾಗಿ ಗಟ್ಟಿಗೊಳಿಸಬಹುದು. ಇವುಗಳಿಂದ ನಿಮ್ಮ ಮೂಳೆಗಳೂ ದೃಢವಾಗುತ್ತವೆ ಎಂಬುದು ನೆನಪಿರಲಿ.
ಬೆಳ್ಳುಳ್ಳಿ ಸೇವನೆಯಿಂದ ಬೊಜ್ಜು ಕರಗಿಸುವುದರಿಂದ ಆರಂಭಿಸಿ ಹಲ್ಲುಗಳ ದೃಢತೆಯ ತನಕ ಹಲವು ಆರೋಗ್ಯದ ಪ್ರಯೋಜನಗಳಿವೆ. ಬೆಳ್ಳುಳ್ಳಿ ತುಂಡಿನಿಂದ ಹಲ್ಲುಗಳನ್ನು ಮಸಾಜ್ ಮಾಡುವ ಮೂಲಕ ಇಲ್ಲವೇ ನೋವಿರುವ ಹಲ್ಲಿನ ಮೇಲೆ ಒತ್ತಿಡುವ ಮೂಲಕ ಈ ನೋವಿನಿಂದ ಮುಕ್ತಿ ಪಡೆಯಬಹುದು.
ಆಮ್ಲಾ ಪೌಡರ್ ಗೆ ನಾಲ್ಕು ಹನಿ ನೀರು ಸೇರಿಸಿ, ಒಂದು ಬೆರಳಿನ ಸಹಾಯದಿಂದ ಹಲ್ಲು ಹಾಗೂ ಒಸಡಿನ ಮೇಲೆ ಮಸಾಜ್ ಮಾಡುವ ಮೂಲಕವೂ ಹಲ್ಲುಗಳನ್ನು ಗಟ್ಟಿಗೊಳಿಸಬಹುದು.