ಹಲ್ಲುಗಳು ನಮ್ಮ ದೇಹದ ಮೂಳೆಗಳ ಪ್ರಮುಖ ಭಾಗವಾಗಿದೆ. ಹಲ್ಲುಗಳ ಸಹಾಯದಿಂದ ನಾವು ರುಚಿಕರವಾದ ತಿನಿಸುಗಳನ್ನು ಆನಂದಿಸಬಹುದು. ಆದರೆ ಹಲ್ಲುಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ ಅದು ಸೂಕ್ಷ್ಮಜೀವಿಗಳ ದಾಳಿಗೆ ಒಳಗಾಗುತ್ತದೆ. ಈ ಕಾರಣದಿಂದಾಗಿ ಹಲ್ಲುನೋವು ಮತ್ತು ಹುಳುಕು ಹಲ್ಲಿನ ಸಮಸ್ಯೆ ಹೆಚ್ಚಾಗುತ್ತದೆ. ಹಾಲು ಹಲ್ಲುಗಳು ಕೊಳೆತರೆ ಅವುಗಳನ್ನು ಕಿತ್ತು ಹಾಕಬಹುದು.
ಆದರೆ ಶಾಶ್ವತ ಹಲ್ಲುಗಳಲ್ಲಿ ಕ್ಯಾವಿಟಿ ಆಗದಂತೆ ನೋಡಿಕೊಂಡು ಅವುಗಳನ್ನು ಕಾಪಾಡಿಕೊಳ್ಳಬೇಕು. ಹಲ್ಲುಗಳಲ್ಲಿ ಕ್ಯಾವಿಟಿ ಆಗದಂತೆ ತಡೆಯಲು ಕೆಲವೊಂದು ಮನೆಮದ್ದುಗಳಿವೆ. ಅವುಗಳನ್ನು ನೋಡೋಣ.
ಬೆಳ್ಳುಳ್ಳಿ: ಬೆಳ್ಳುಳ್ಳಿ ಎಷ್ಟು ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಅದರಲ್ಲಿರುವ ಆಯುರ್ವೇದದ ಗುಣಲಕ್ಷಣಗಳು ಸೂಕ್ಷ್ಮಜೀವಿಗಳನ್ನು ನಾಶಮಾಡುತ್ತವೆ. ಬೆಳ್ಳುಳ್ಳಿಯನ್ನು ಜಜ್ಜಿ ಹುಳುಕಾದ ಹಲ್ಲುಗಳ ಮೇಲೆ ಹಚ್ಚಿ. ಇದು ಹಲ್ಲು ನೋವನ್ನು ಕೂಡ ನಿವಾರಣೆ ಮಾಡುತ್ತದೆ.
ಪೇರಲ ಎಲೆಗಳು: ಪೇರಲವು ತುಂಬಾ ಟೇಸ್ಟಿ ಹಣ್ಣು. ಇದನ್ನು ಸಾಮಾನ್ಯವಾಗಿ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ತಿನ್ನಲಾಗುತ್ತದೆ. ಆದರೆ ಪೇರಲ ಎಲೆಗಳಲ್ಲಿ ಕೂಡ ಅನೇಕ ರೀತಿಯ ಔಷಧೀಯ ಗುಣಗಳಿವೆ. ಇದು ಬಹಳಷ್ಟು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಪೇರಲ ಎಲೆಗಳನ್ನು ನೀರಿನಲ್ಲಿ ಕುದಿಸಿಕೊಂಡು ಅದು ಸ್ವಲ್ಪ ತಣ್ಣಗಾದ ಬಳಿಕ ಬಾಯಿಯಲ್ಲಿ ಹಾಕಿ ಮುಕ್ಕಳಿಸಿ. ಹೀಗೆ ಮಾಡುವುದರಿಂದ ಹಲ್ಲುಗಳ ಕ್ಯಾವಿಟಿ ನಿವಾರಣೆಯಾಗುತ್ತದೆ.
ಮೊಟ್ಟೆಯ ಚಿಪ್ಪು: ಸಾಮಾನ್ಯವಾಗಿ ಮೊಟ್ಟೆಯ ಸಿಪ್ಪೆ ಅಥವಾ ಚಿಪ್ಪನ್ನು ಎಲ್ಲರೂ ಡಸ್ಟ್‌ಬಿನ್‌ಗೆ ಎಸೆಯುತ್ತಾರೆ. ಈ ಮೊಟ್ಟೆಯ ಚಿಪ್ಪುಗಳು ಕೂಡ ಕ್ಯಾವಿಟಿಯಿಂದ ಪರಿಹಾರ ನೀಡಬಲ್ಲವು. ಮೊಟ್ಟೆಯ ಸಿಪ್ಪೆಗಳನ್ನು ಪುಡಿಮಾಡಿ ಅದಕ್ಕೆ ಬೇಕಿಂಗ್ ಸೋಡಾ ಬೆರೆಸಿ ಪೇಸ್ಟ್ ತಯಾರಿಸಿ ಕೊಳೆತ ಹಲ್ಲುಗಳ ಮೇಲೆ ಹಚ್ಚಿ.
ಲವಂಗ: ಕ್ಯಾವಿಟಿ ತಡೆಗಟ್ಟುಗಲ್ಲಿ ಲವಂಗ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಲವಂಗದ ಪುಡಿಯನ್ನು ತೆಂಗಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಇದನ್ನು ಹತ್ತಿಯಲ್ಲಿ ಅದ್ದಿಕೊಂಡು ಆ ಉಂಡೆಯನ್ನು ಬಾಧಿತ ಹಲ್ಲುಗಳ ನಡುವೆ ಒತ್ತಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.