ಪ್ರತಿನಿತ್ಯ ಹಲ್ಲುಗಳನ್ನು ಉಜ್ಜುತ್ತೇವೆ. ಆದರೂ ಕೆಲವೊಮ್ಮೆ ಗಮನಕ್ಕೆ ಬಾರದಂತೆ ಒಸಡಿಗೆ ಗಾಯ ಮಾಡಿಕೊಳ್ಳುತ್ತೇವೆ. ಇದಕ್ಕೆ ಕಾರಣ ಸರಿಯಾದ ವಿಧಾನದ ಮೂಲಕ ಹಲ್ಲುಜ್ಜದೇ ಇರುವುದು.
ಬಹಳಷ್ಟು ಜನರು ಹಲ್ಲುಜ್ಜಲು ಸರಿಯಾದ ವಿಧಾನಗಳನ್ನು ಅನುಸರಿಸುವುದಿಲ್ಲ. ಆದರೆ ಅದಕ್ಕೊಂದು ಸಮರ್ಪಕ ವಿಧಾನವಿದೆ. ಈ ವಿಧಾನಗಳನ್ನು ಅನುಸರಿಸಿದರೆ ಇಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು.
* ಮೇಲಿನ ಮುಂದಿನ ಹಲ್ಲುಗಳಾದ ಬಾಚಿ ಹಲ್ಲುಗಳು, ಕೋರೆಹಲ್ಲು ಗಳನ್ನು ಮೇಲಿನಿಂದ ಕೆಳಗೆ ಬರುವಂತೆ ಉಜ್ಜಬೇಕು.
* ಕೆಳಗಿನ ಬಾಚಿ ಮತ್ತು ಕೋರೆ ಹಲ್ಲುಗಳನ್ನು ಬ್ರಷ್ ಕೆಳಗಿನಿಂದ ಮೇಲಕ್ಕೆ ಬರುವಂತೆ ಉಜ್ಜಬೇಕು.
* ಮೇಲಿನ ಹಾಗೂ ಕೆಳಗಿನ ಬಾಚಿಹಲ್ಲು, ಕೋರೆ ಹಲ್ಲುಗಳ ಒಳಗಿನ ಭಾಗವನ್ನು ಬ್ರಷ್ ತುದಿಯಿಂದ ಉಜ್ಜಬೇಕು.
* ಮೇಲಿನ ದವಡೆಹಲ್ಲುಗಳು ಹೊರ ಮತ್ತು ಒಳ ಭಾಗವನ್ನು 450 ಕೋನದಲ್ಲಿ ಬ್ರಷ್ ಅನ್ನು ಇಟ್ಟು ಮೇಲಿನಿಂದ ಕೆಳಗೆ ಬರುವಂತೆ ಉಜ್ಜಬೇಕು.
* ಕೆಳಗಿನ ದವಡೆ ಹಲ್ಲುಗಳ ಹೊರ ಮತ್ತು ಒಳ ಭಾಗವನ್ನು ಕೆಳಗಿನಿಂದ ಮೇಲಕ್ಕೆ ಬ್ರಷ್ ಮಾಡಬೇಕು.