ಹಲ್ಲಿ ಕಂಡರೆ ಅನೇಕರಿಗೆ ಭಯ ಜಾಸ್ತಿ. ಈ ಭಯಕ್ಕೆ ವಿಶೇಷ ಕಾರಣವಿದೆ. ಇದನ್ನು ಹರ್ಪಿಟೋಫೋಬಿಯಾ ಎಂದು ಕರೆಯಲಾಗುತ್ತದೆ. ಅಡಿಗೆ ಮನೆ, ಬಾತ್‌ರೂಮ್‌ನಲ್ಲೆಲ್ಲಾದ್ರೂ ಹಲ್ಲಿ ಕಾಣಿಸಿಕೊಂಡ್ರೆ ಹರ್ಪಿಟೋಫೋಬಿಯಾದಿಂದ ಬಳಲುತ್ತಿರುವ ಜನರು ಹೆದರಿ ಹೋಗ್ತಾರೆ.
ಹರ್ಪಿಟೋಫೋಬಿಯಾದ ಸೌಮ್ಯ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯು ಹಲ್ಲಿಯ ಹತ್ತಿರಕ್ಕೂ ಬರುವುದಿಲ್ಲ. ಅದನ್ನು ಮುಟ್ಟಲು ಹೆದರುತ್ತಾನೆ. ನೀವು ಸಹ ಹಲ್ಲಿಗಳಿಗೆ ಹೆದರುತ್ತಿದ್ದರೆ, ಅವುಗಳನ್ನು ಮನೆಯಿಂದ ಶಾಶ್ವತವಾಗಿ ಓಡಿಸಲು ಕೆಲವೊಂದು ಸುಲಭ ವಿಧಾನಗಳು ಇಲ್ಲಿವೆ.
ಈರುಳ್ಳಿ: ಈರುಳ್ಳಿ ಹಲ್ಲಿಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಈರುಳ್ಳಿಯಲ್ಲಿ ಸಲ್ಫರ್ ಇರುತ್ತದೆ ಮತ್ತು ಹಲ್ಲಿಗಳು ಗಂಧಕದ ವಾಸನೆಯನ್ನು ಇಷ್ಟಪಡುವುದಿಲ್ಲ. ಈರುಳ್ಳಿಯನ್ನು ಕತ್ತರಿಸಿ ಹಲ್ಲಿಗಳು ಬರುವ ಸ್ಥಳಗಳಲ್ಲಿ ಇರಿಸಿ. ಈರುಳ್ಳಿ ರಸವನ್ನು ತೆಗೆದು ಕೂಡ ಹಲ್ಲಿ ಬರುವ ಸ್ಥಳದಲ್ಲಿ ಸಿಂಪಡಿಸಬಹುದು.
ನಾಫ್ತಲೀನ್ ಬಾಲ್ಸ್: ಮನೆಯಿಂದ ಹಲ್ಲಿಗಳನ್ನು ಓಡಿಸಲು ನಾಫ್ತಲೀನ್ ಬಾಲ್ಸ್ ಬಳಸಿ. ಮನೆಯಲ್ಲಿ ಹಲ್ಲಿಗಳು ಬಂದು ಹೋಗುವ ಸ್ಥಳಗಳಲ್ಲಿ ನಾಫ್ತಲೀನ್ ಬಾಲ್‌ಗಳನ್ನು ಇರಿಸಿ. ಬಟ್ಟೆಗಳ ನಡುವೆ ಮತ್ತು ಬಾಗಿಲುಗಳ ಹಿಂದೆ ನಾಫ್ಥಲೀನ್ ಬಾಲ್‌ಗಳನ್ನು ಇರಿಸಬಹುದು. ಇದರ ವಾಸನೆ ತಡೆಯಲಾರದೆ ಹಲ್ಲಿಗಳು ಹೊರಹೋಗುತ್ತವೆ.
ಪೆಪ್ಪರ್ ಸ್ಪ್ರೇ: ಹಲ್ಲಿಗಳನ್ನು ಓಡಿಸಲು ಪೆಪ್ಪರ್ ಸ್ಪ್ರೇ ತುಂಬಾ ಪರಿಣಾಮಕಾರಿಯಾಗಿದೆ. ಹಲ್ಲಿಗಳು ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ರೆ ಮನೆಯಿಂದ ಓಡಿಹೋಗುತ್ತವೆ. ಹಲ್ಲಿಗಳು ಬರುವ ಜಾಗದಲ್ಲೆಲ್ಲ ಪೆಪ್ಪರ್ ಸ್ಪ್ರೇ ಬಳಸಿ.