ಹಲ್ಲು ನೋವಿನ ಸಮಸ್ಯೆ ಅಂದರೆ ಸುಲಭ ಅಲ್ಲ. ಹಲ್ಲು ನೋವು, ಬಾಯಿ ವಾಸನೆ, ಮಾಸಿದ ಬಣ್ಣದ ಹಲ್ಲು ಹೀಗೆ ಒಬ್ಬೊಬ್ಬರಿಗೆ ಒಂದಿಲ್ಲೊಂದು ಸಮಸ್ಯೆ ಇದ್ದೆ ಇರುತ್ತೆ. ಆದರೆ ಈ ಎಲ್ಲಾ ಸಮಸ್ಯೆಗಾಗಿ ದುಬಾರಿ ಟೂತ್ಪೇಸ್ಟ್ ಹಾಗೂ ಬ್ರಶ್ಗಳನ್ನ ಬಳಕೆ ಮಾಡಿ ಸೋತಿದ್ದರೆ ಈ ಮನೆ ಮದ್ದು ನಿಮಗೆ ಸಹಾಯಕವಾಗಬಲ್ಲದು.
ನಿಮ್ಮ ಹಲ್ಲಿನ ಹೊಳಪನ್ನ ಜಾಸ್ತಿ ಮಾಡಬೇಕು ಅಂತಾ ನೀವು ಪ್ರಯತ್ನದಲ್ಲಿ ಇದ್ದರೆ ಅಡುಗೆ ಸೋಡಾವನ್ನ ಉಪ್ಪಿನ ಜೊತೆ ಮಿಶ್ರಣ ಮಾಡಿ ಈ ಮಿಶ್ರಣದಿಂದ ನಿಮ್ಮ ಹಲ್ಲನ್ನ ಸ್ವಚ್ಛ ಮಾಡಿದ್ರೆ ನಿಮ್ಮ ಹಲ್ಲು ಹೊಳೆಯೋದು ಪಕ್ಕಾ.
ಸಾಸಿವೆ ಎಣ್ಣೆಗೆ ಉಪ್ಪನ್ನ ಸೇರಿಸಿ ಇದನ್ನ ಬೆಳಗ್ಗೆ ಹಾಗೂ ಸಂಜೆ ಬಳಕೆ ಮಾಡೋದ್ರಿಂದ ಹಲ್ಲು ನೋವು ಹಾಗೂ ಹಲ್ಲಿನಲ್ಲಿ ರಕ್ತ ಬರುವ ಸಮಸ್ಯೆ ಬದಲಾಗಲಿದೆ. ಅಲ್ಲದೇ ಹಲ್ಲಿಗೆ ಹೊಳಪು ಕೂಡ ಬರಲಿದೆ.
ಬೆಳಗ್ಗೆ ಹಲ್ಲುಜ್ಜೋಕೂ ಮುನ್ನ ಬಾಯಿಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನ ಹಾಕಿ ಮುಕ್ಕಳಿಸಿ. 15 ನಿಮಿಷ ಬಿಟ್ಟು ಬಾಯಿಯನ್ನ ತೊಳೆಯಿರಿ. ಇದರಿಂದಲೂ ನಿಮ್ಮ ಹಲ್ಲು ಬೆಳ್ಳಗೆ ಆಗಲಿದೆ.
ಅಲೋವೇರಾ ಜೆಲ್ನ್ನು ಹಲ್ಲಿಗೆ ಸವರೋದ್ರಿಂದ ನಿಮ್ಮ ಹಲ್ಲಿಗೆ ಹೊಳಪು ಸಿಗಲಿದೆ.