ಅಡುಗೆಯಿಂದ ಹಿಡಿದು ಚರ್ಮದವರೆಗೆ ದಿನನಿತ್ಯದ ಜೀವನದಲ್ಲಿ ತೆಂಗಿನೆಣ್ಣೆಯ ಉಪಯೋಗವಿದೆ. ತೆಂಗಿನೆಣ್ಣೆಯಲ್ಲಿರುವ ಔಷಧಿಯ ಗುಣ ಹಲ್ಲುಗಳನ್ನು ಕೂಡ ಗಟ್ಟಿಯಾಗಿಸುತ್ತವೆಯಂತೆ.
ಹಲ್ಲಜ್ಜಲು ಈ ತೆಂಗಿನೆಣ್ಣೆಯನ್ನು ಹೇಗೆಲ್ಲಾ ಬಳಸಬಹುದು ಏನೆಲ್ಲಾ ಉಪಯೋಗವಿದೆ ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.
*ತೆಂಗಿನೆಣ್ಣೆಯು ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ. ಎಣ್ಣೆಯನ್ನು ಬಳಸಿ ಬಾಯಿ ಮುಕ್ಕಳಿಸುವ ಪದ್ಧತಿ ಹಿಂದಿನ ಕಾಲದಿಂದಲೂ ಇದೆ. ಇದರಿಂದ ಬಾಯಲ್ಲಿರುವ ಬ್ಯಾಕ್ಟಿರಿಯಾಗಳು ನಾಶವಾಗುತ್ತದೆ.
*ತೆಂಗಿನೆಣ್ಣೆಯಲ್ಲಿ ಯಾವುದೇ ರೀತಿಯ ಕೆಮಿಕಲ್ಸ್ ಇರುವುದಿಲ್ಲ. ಶುದ್ಧವಾದ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಟೂತ್ ಪೇಸ್ಟ್ ರೀತಿ ಬಳಸಬಹುದು. ತೆಂಗಿನೆಣ್ಣೆ ಬಳಸಿಕೊಂಡು ಕೆಲವೊಂದು ವಸ್ತುವನ್ನು ಉಪಯೋಗಿಸಿಕೊಂಡು ಮನೆಯಲ್ಲಿ ಟೂತ್ ಪೇಸ್ಟ್ ತಯಾರಿಸಿಕೊಳ್ಳಿ. ಇದರಿಂದ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.
*ಸ್ವಲ್ಪ ತೆಂಗಿನೆಣ್ಣೆಯನ್ನು ತೆಗೆದುಕೊಂಡು ನಿಮ್ಮ ಒಸಡಿಗೆ 10 ನಿಮಿಷ ಮಸಾಜ್ ಮಾಡಿ. ಇದರಿಂದ ಬಾಯಲ್ಲಿರುವ ಬ್ಯಾಕ್ಟಿರಿಯಾಗಳು ನಾಶವಾಗುತ್ತದೆ.
*1 ಟೀ ಸ್ಪೂನ್ ಬೇಕಿಂಗ್ ಸೋಡಾ, ಅರ್ಧ ಚಮಚ ಉಪ್ಪು, 1 ಹನಿ ಪುದೀನಾ ಎಣ್ಣೆ, 4 ಹನಿ ತೆಂಗಿನೆಣ್ಣೆ, 3 ಹನಿ ನೀರು ಇವಿಷ್ಟನ್ನು ಒಂದು ಬೌಲ್ ಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಪೇಸ್ಟ್ ರೀತಿ ಆದ ನಂತರ ಇದರ ಮೂಲಕ ನಿಮ್ಮ ಹಲ್ಲು ತಿಕ್ಕಿ.