ಹಲ್ಲು ನೋವು ಬರದಂತೆ ತಡೆಯುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ.
ಏನಾದರೂ ತಿನ್ನುತ್ತಲೇ ಇರಬೇಕು ಎನಿಸುವುದು ಸಹಜ. ಅದೇನೇ ಇದ್ದರೂ ಎರಡು ಬಾರಿ ಮರೆಯದೆ ಹಲ್ಲುಜ್ಜಿ. ಸಿಹಿ ತಿಂಡಿ ತಿನಿಸು ತಿಂದ ಬಳಿಕ ಬಾಯಿ ಮುಕ್ಕಳಿಸುವಾಗ ಸಾಧ್ಯವಾದರೆ ಎಲ್ಲಾ ಹಲ್ಲುಗಳಿಗೆ ತಾಕುವಂತೆ ಒಮ್ಮೆ ಕೈಯಾಡಿಸಿ.
ರಾತ್ರಿ ಮಲಗುವ ಮುನ್ನ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಹಲ್ಲಿನಡಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿದ್ದರೆ ಪಿನ್ ಮೂಲಕ ತೆಗೆಯದಿರಿ. ನಾಲಿಗೆ ಕ್ಲೀನರ್ ನೊಂದಿಗೆ ಬೆಳಿಗ್ಗೆ ಮತ್ತು ರಾತ್ರಿ ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸಿ. ಇದರಿಂದ ಬ್ಯಾಕ್ಟೀರಿಯಾ ಕಡಿಮೆಯಾಗುತ್ತದೆ. ಉಸಿರಾಟದ ದುರ್ಗಂಧವೂ ದೂರವಾಗುತ್ತದೆ. ಟೂತ್ ಪಿಕ್ ತಪ್ಪಿಯೂ ಬಳಸದಿರಿ.
ಮಕ್ಕಳ ಹಲ್ಲಿನ ಬಗ್ಗೆ ವಿಶೇಷ ಗಮನ ಕೊಡಿ. ಮಕ್ಕಳಲ್ಲಿ ನಿಯಮಿತ ಅಭ್ಯಾಸ ಬೆಳೆಸಲು ಹಲ್ಲುಜ್ಜುವಾಗ ನೀವೂ ಜೊತೆಯಾಗಿ. ಸಕ್ಕರೆಯಿಂದ ಏಕೆ ದೂರವಿರಬೇಕು ಎಂಬುದನ್ನು ತಿಳಿಹೇಳಿ.
ಸರಿಯಾದ ಹಲ್ಲುಜ್ಜುವ ತಂತ್ರಗಳ ವಿಡಿಯೋಗಳನ್ನು ಆಕರ್ಷಕವಾಗಿ ತೋರಿಸಿ. ಮನೆಯಲ್ಲಿ ಚಾಕೊಲೇಟ್ ಗಳು ಮತ್ತು ಜಿಗುಟಾದ ಮಿಠಾಯಿಗಳನ್ನು ಸಂಗ್ರಹಿಸುವುದನ್ನು ತಪ್ಪಿಸಿ.
ವಯಸ್ಸಾದ ಹಿರಿಯರು ಕೂಡಾ ಹಲ್ಲಿನ ಬಗ್ಗೆ ಜಾಗರೂಕರಾಗಿರಬೇಕು. ಗಟ್ಟಿಯಾದ ಬೀಜಗಳನ್ನು ತಿನ್ನದಿರಿ. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮುಖ್ಯ. ಸಾಸಿವೆ ಎಣ್ಣೆ ಹಾಕಿ ಒಸಡುಗಳ ಮೇಲೆ ಉಪ್ಪಿನೊಂದಿಗೆ ಮೃದುವಾದ ಮಸಾಜ್ ಮಾಡಿಕೊಳ್ಳುವುದು ಒಳ್ಳೆಯದು. ಅವರು ಸೆಟ್ ಹಲ್ಲುಗಳನ್ನು ಬಳಸಿದರೆ ವಿಶೇಷವಾಗಿ ಸ್ವಚ್ಛಗೊಳಿಸುವಾಗ ಅವುಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ.