ನಿಮ್ಮ ಮನೆಯಲ್ಲಿ ವಿಪರೀತ ಹಲ್ಲಿಗಳಿವೆಯೇ? ಅವುಗಳನ್ನು ಓಡಿಸುವುದು ಹೇಗೆಂದು ತಿಳಿಯದೆ ಒದ್ದಾಡುತ್ತಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ.
ಕಾಳುಮೆಣಸಿನ ಪುಡಿಯನ್ನು ತಯಾರಿಸಿ. ಇದಕ್ಕೆ ತುಸು ನೀರು ಬೆರೆಸಿ. ಪೆಪ್ಪರ್ ಸ್ಪ್ರೇ ಹಲ್ಲಿಗಳ ದೇಹದ ಮೇಲೆ ಸುಡುವ ಅನುಭವವನ್ನು ಉಂಟುಮಾಡುತ್ತದೆ. ಹಾಗಾಗಿ ಇದನ್ನು ಬಳಸಿನೋಡಿ.
ನೀವು ಮೊಟ್ಟೆ ತಿನ್ನುವವರಾಗಿದ್ದರೆ ಅದರ ಸಿಪ್ಪೆಯನ್ನು ಎಸೆಯದಿರಿ. ಬಿಳಿ ಸಿಪ್ಪೆಯನ್ನು ಹಲ್ಲಿಗಳು ಓಡಾಡುವ ಜಾಗದಲ್ಲಿ ಇಟ್ಟರೆ ಹಲ್ಲಿಗಳು ಅತ್ತ ಸುಳಿಯುವುದಿಲ್ಲ.
ಈರುಳ್ಳಿ ಅಥವಾ ಬೆಳ್ಳುಳ್ಳಿ ಎಸಳುಗಳನ್ನು ಇದೇ ರೀತಿ ಮಾಡಬಹುದು. ಇವುಗಳನ್ನು ಹಲ್ಲಿ ಓಡಾಡುವ ಜಾಗದಲ್ಲಿ ಇಟ್ಟರೆ ಅಥವಾ ಫ್ಯಾನ್ ನ ಹಿಂಭಾಗದಲ್ಲಿ ಇಟ್ಟರೆ ಅದರ ವಾಸನೆಗೆ ಹಲ್ಲಿಗಳು ಓಡಿ ಹೋಗುತ್ತದೆ.