ಬೆಂಗಳೂರು: ರಾಜ್ಯಾದ್ಯಂತ ಹಲಾಲ್ ಕಟ್ V/S ಜಟ್ಕಾ ಕಟ್ ಅಭಿಯಾನ ತೀವ್ರಗೊಂಡಿದ್ದು, ಹಲಾಲ್ ಹಿಂದೂಗಳ ಆಹಾರವಲ್ಲ, ಈ ಬಗ್ಗೆ ಗ್ರಾಹಕರು ಸ್ವತಃ ಜಾಗೃತರಾಗಿ ಹಲಾಲ್ ಬಹಿಷ್ಕರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಹಲಾಲ್ ವಿರೋಧಿಸಿ, ಜಟ್ಕಾ ಕಟ್ ಬಗ್ಗೆ ಜಾಗೃತಿ ಅಭಿಯಾನ ನಡೆಸಿದ ಪ್ರಶಾಂತ್ ಸಂಬರಗಿ, ಹಲಾಲ್ ಹಾಗೂ ಜಟ್ಕಾ ಕಟ್ ವ್ಯತ್ಯಾಸ ತಿಳಿಸಿದರು. ಜಟ್ಕಾ ಮೀಟ್ ಹಿಂದೂಗಳು ಪುರಾಣ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ. ಪ್ರಾಣಿ ವಧೆ ವೇಳೆ ಒಂದೇ ಏಟಿನಲ್ಲಿ ಪ್ರಾಣಿಗೆ ಹೊಡೆದಾಗ ಯಾವುದೇ ನೋವಾಗದೇ ಪ್ರಾಣಿ ಸಾವನ್ನಪ್ಪುತ್ತದೆ. ಆದರೆ ಹಲಾಲ್ ನಲ್ಲಿ ಪ್ರಾಣಿಯ ಕತ್ತಿನ ನರ ಕತ್ತರಿಸಿ ರಕ್ತ ಹೊರತೆಗೆಯಲಾಗುತ್ತದೆ. ಜೀವ ಹೋಗುವವರೆಗೂ ಪ್ರಾಣಿ ವಿಲ ವಿಲ ಒದ್ದಾಡಿ ಸಾವನ್ನಪ್ಪುತ್ತದೆ. ಈ ಸಂದರ್ಭದಲ್ಲಿ ಹಲವು ವಿಷಭರಿತ ರಾಸಾಯನಿಕಗಳು ಹೊರಬರುತ್ತವೆ ಇಂತಹ ಹಲಾಲ್ ವಿರುದ್ಧವಾಗಿ ನಾವು ಹೋರಾಡುತ್ತಿದ್ದೇವೆ. ಗ್ರಾಹಕರು ಸ್ವತಃ ಜಾಗೃತರಾಗಿ ಹಲಾಲ್ ಮಾಂಸವನ್ನು ಬಹಿಷ್ಕರಿಸಿ ಎಂದು ಕರೆ ನೀಡಿದರು.
ಹಲಾಲ್ ಯಾವುದೇ ಸರ್ಕಾರಿ ಸರ್ಟಿಫಿಕೇಟ್ ನಿಂದ ನಡೆಯುತ್ತಿಲ್ಲ. 15 ವರ್ಷಗಳಿಂದ ನಮ್ಮ ಮೇಲೆ ಹಲಾಲ್ ಹೇರಿಕೆ ಮಾಡಲಾಗುತ್ತಿದೆ. ಹಲಾಲ್ ಫುಡ್ ಪ್ರಾಡೆಕ್ಟ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. 300 ಹಲಾಲ್ ಸರ್ಟಿಫಿಕೆಟ್ ಕಂಪನಿಗಳಿವೆ. ಇವೆಲ್ಲವೂ ಕಾನೂನು ಬಾಹಿರ. ಅನೇಕ ಮುಸ್ಲಿಂ ಯುವಕರಿಗೆ ಇದೊಂದು ಉದ್ಯಮವಾಗಿದೆ. ಹೋಟೆಲ್, ಅಂಗಡಿಗಳಲ್ಲಿ ಹಲಾಲ್ ಮಾಡಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಭಯೋತ್ಪಾದಕ ಚಟುವಟಿಕೆಗಳಿಗೆ ಆ ಹಣವನ್ನು ಕಳಿಸಲಾಗುತ್ತಿದೆ. ಹಲಾಲ್ ದೇಶಕ್ಕೆ ಮಾರಕವಾಗಿದೆ. ಹಲಾಲ್ ಬದಲು ಜಟ್ಕಾ ಕಟ್ ನಡೆಯಲಿ. ಹಲಾಲ್ ಮಾಂಸವನ್ನು ಖರೀದಿಗೆ ಹಿಂದೂಗಳು ಮುಂದಾಗದಿದ್ದರೆ ತಾನಾಗಿಯೇ ಹಲಾಲ್ ಕಡಿಮೆಯಾಗಲಿದೆ ಎಂದು ತಿಳಿಸಿದರು.