ಬೆಂಗಳೂರು: ದೇಶಾದ್ಯಂತ ಬೈಕಿಂಗ್ ಉತ್ಸಾಹಿಗಳಿಗೆ ಉತ್ಸಾಹಕರ ಮತ್ತು ರೋಮಾಂಚಕ ರೈಡ್ ಅನುಭವದ ಭರವಸೆ ನೀಡಿರುವ ಯಮಾಹಾ ಮೋಟಾರ್(ಐವೈಎಂ) ಪ್ರೈ.ಲಿ. ಇಂದು 2023ರ ಎಫ್‍ಝಡ್‍ಎಸ್-ಎಫ್‍ಐ ವಿ4 ಡಿಲಕ್ಸ್, ಎಫ್‍ಝಡ್-ಎಕ್ಸ್, ಎಂಟಿ-15 ವಿ2 ಡಿಲಕ್ಸ್ ಮತ್ತು ಆರ್15ಎಂ ಅನ್ನು ಹೊಸ ನೋಟ ಮತ್ತು ಈ ವರ್ಗದ ಮುಂಚೂಣಿಯ ವಿಶೇಷತೆಗಳೊಂದಿಗೆ ಬಿಡುಗಡೆ ಮಾಡಿದೆ.
150-ಸಿಸಿ ವರ್ಗವನ್ನು ಮುನ್ನಡೆಸುತ್ತಿರುವ ಯಮಾಹಾ ಎಫ್‍ಝಡ್‍ಎಸ್-ಎಫ್‍ಐ ವಿ4 ಡಿಲಕ್ಸ್, ಎಫ್‍ಝಡ್-ಎಕ್ಸ್ ಮತ್ತು ಎಂಟಿ-15 ವಿ2 ಡಿಲಕ್ಸ್ ಮಾದರಿಗಳು ಯಮಾಹಾ ಆರ್15ಎಂ ಮತ್ತು ಆರ್15ವಿ4ಗಳೊಂದಿಗೆ ಈಗ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ(ಟಿಸಿಎಸ್) ಅನ್ನು ಸ್ಟಾಂಡರ್ಡ್ ಫೀಚರ್ ಆಗಿ ಹೊಂದಿವೆ.
ಈ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಇಗ್ನಿಷನ್ ಸಮಯವನ್ನು ನಿಯಂತ್ರಿಸುತ್ತದೆ ಮತ್ತು ಹೆಚ್ಚು ಜಾರುವಿಕೆ ತಪ್ಪಿಸಲು ತಕ್ಷಣವೇ ಎಂಜಿನ್ ಶಕ್ತಿಯನ್ನು ಹೊಂದಿಸಲು ಇಂಧನದ ಸೇರ್ಪಡಿಕೆ ಪ್ರಮಾಣ ನಿಯಂತ್ರಿಸುತ್ತದೆ. ಇದರಿಂದ ಚಕ್ರಕ್ಕೆ ಶಕ್ತಿಯ ದಕ್ಷ ಪೂರೈಕೆಯಾಗುತ್ತದೆ ಮತ್ತು ಚಕ್ರ ತಿರುಗುವಿಕೆ ಕಡಿಮೆ ಮಾಡುತ್ತದೆ, ಇದರಿಂದ ಆಧುನಿಕ ಕಾಲದ ಬೈಕರ್ ಗಳು ಬಯಸುವ ಥ್ರಿಲ್ ನೀಡುತ್ತದೆ.
ಬೆಲೆ ಮಾಹಿತಿ:
ಮಾದರಿಗಳು ಹೊಸ ಬಣ್ಣ ಎಕ್ಸ್-ಶೋರೂಂ(ನವದೆಹಲಿ)
ಎಫ್‍ಝಡ್‍ಎಸ್-ಎಫ್‍ಐ ವಿ4 ಡಿಲಕ್ಸ್ – 1, 27,400 ರೂ.
ಎಫ್‍ಝಡ್-ಎಕ್ಸ್ ಡಾರ್ಕ್ ಮ್ಯಾಟ್ ಬ್ಲೂ 1, 36, 900 ರೂ.
ಆರ್15ಎಂ – 1, 93, 900 ರೂ.
ಆರ್15ವಿ4 ಡಾರ್ಕ್ ನೈಟ್ 1, 81,900 ರೂ.
ಎಂಟಿ15 ವಿ2 ಡಿಲಕ್ಸ್ ಮೆಟಾಲಿಕ್ ಬ್ಲಾಕ್ 1, 68, 400 ರೂ.