ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಸ್ವಂತ ಮಗನ ಕಳೆದುಕೊಂಡಿರುವ ಪೋಷಕರ ದುಃಖ ಆಕಾಶಮುಟ್ಟಿದೆ. ಕಳೆದ ಮೂರು ದಿನದಿಂದ ಮಗನ ಸಾವಿನಿಂದ ನಿತ್ರಾಣವಾಗಿರೊ ಹರ್ಷನ ಪೋಷಕರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದು ಬಂದಿದೆ.
ಪುತ್ರ ವಿಯೋಗದಿಂದ ಊಟ, ನಿದ್ರೆ ಬಿಟ್ಟಿರುವ ಹರ್ಷನ ತಂದೆ-ತಾಯಿ ಇಬ್ಬರ ಆರೋಗ್ಯದಲ್ಲೂ ಏರುಪೇರು ಉಂಟಾಗಿದೆ. ಇನ್ನು ಅವರ ಮನೆಗೆ ತೆರಳಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ದುಃಖದಿಂದ ಊಟ ಬಿಟ್ಟಿರುವ ಅವರು ಸುಸ್ತಾಗಿರುವ ಕಾರಣ ಗ್ಲುಕೋಸ್ ಸಹ ನೀಡಿದ್ದಾರೆ. ಅಲ್ಲದೇ ಇಬ್ಬರಿಗೂ ಸರಿಯಾಗಿ ನಿದ್ರೆ ಮಾಡಿ, ಸರಿಯಾದ ಸಮಯಕ್ಕೆ ಊಟ ಸೇವಿಸುವಂತೆ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ. ವೈದ್ಯರ ಚಿಕಿತ್ಸೆ ನಂತರ ಇಬ್ಬರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆಯೆಂದು ತಿಳಿದು ಬಂದಿದೆ.