ದೀಪಾವಳಿ ಮತ್ತು ಹಬ್ಬದ ಸೀಸನ್ ಮುಗಿದಿದೆ. ಆದರೂ ಕಾರ್‌ಗಳ ಖರೀದಿ ಮೇಲೆ ಆಫರ್‌ಗಳು ಮುಗಿದಿಲ್ಲ. ಹ್ಯುಂಡೈ ಮತ್ತು ಮಾರುತಿ ಸುಜುಕಿಯಂತಹ ಕಂಪನಿಗಳು ತಮ್ಮ ಕಾರುಗಳನ್ನು ಅಗ್ಗದ ದರಗಳಿಗೆ ಮಾರಾಟ ಮಾಡುತ್ತಿವೆ. ಮಾರುತಿ ಸುಜುಕಿ ಕಾರುಗಳನ್ನಂತೂ 50 ಸಾವಿರ ರೂಪಾಯಿ ರಿಯಾಯಿತಿಯಲ್ಲಿ ಖರೀದಿಸಬಹುದು. ಮಾರುತಿ ಸುಜುಕಿಯ ಎರಡು ಕಾರುಗಳ ಮೇಲೆ ಈ ಆಫರ್ ಇದೆ. ವಿಶೇಷವೆಂದರೆ ಅಕ್ಟೋಬರ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಕೂಡ ಇದರಲ್ಲಿ ಸೇರಿದೆ.
ಅಕ್ಟೋಬರ್‌ನಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಅಂದ್ರೆ ಮಾರುತಿ ಆಲ್ಟೋ. ಈ ವಾಹನದ 21,260 ಯೂನಿಟ್‌ಗಳು ಬಿಕರಿಯಾಗಿದ್ದವು. 50 ಸಾವಿರ ರೂಪಾಯಿ ಡಿಸ್ಕೌಂಟ್‌ನಲ್ಲಿ ಇದು ಸಿಗ್ತಾ ಇದೆ. ಮಾರುತಿ ಆಲ್ಟೊ ಎರಡು ರೂಪಾಂತರಗಳಲ್ಲಿ ಬರುತ್ತದೆ – ಆಲ್ಟೊ 800 ಮತ್ತು ಆಲ್ಟೊ ಕೆ10. ನವೆಂಬರ್‌ನಲ್ಲಿ ಕಂಪನಿಯು ಆಲ್ಟೊ ಕೆ10 ಮೇಲೆ 50,000 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಮಾರುತಿ ಸುಜುಕಿ ಆಲ್ಟೊ ಕೆ10 ಬೆಲೆ 4.59 ಲಕ್ಷ ರೂಪಾಯಿಯಿಂದ ಪ್ರಾರಂಭ.
ನವೆಂಬರ್‌ನಲ್ಲಿ ನೀವು ಈ ಕಾರನ್ನು ಇನ್ನಷ್ಟು ಅಗ್ಗವಾಗಿ ಖರೀದಿಸಬಹುದು. ಈ ವಾಹನದ ಮೇಲೆ 30,000 ನಗದು ರಿಯಾಯಿತಿ, 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಮತ್ತು 5,000 ರೂಪಾಯಿ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.ಇಷ್ಟೇ ಅಲ್ಲ, ಮಾರುತಿ ಸುಜುಕಿ ತನ್ನ ಎಸ್-ಪ್ರೆಸ್ಸೋ ಕಾರಿನ ಮೇಲೆ ಕೂಡ 50 ಸಾವಿರ ರೂಪಾಯಿಗಳ ರಿಯಾಯಿತಿ ನೀಡುತ್ತಿದೆ. ಇದರಲ್ಲಿ 30 ಸಾವಿರ ರೂಪಾಯಿ ನಗದು ರಿಯಾಯಿತಿ ನೀಡಲಾಗುತ್ತಿದೆ. 15,000 ರೂಪಾಯಿ ಎಕ್ಸ್ ಚೇಂಜ್ ಬೋನಸ್ ಮತ್ತು 5 ಸಾವಿರ ರೂಪಾಯಿ ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಇದು ಒಳಗೊಂಡಿದೆ. ಈ ವಾಹನದ ಆರಂಬಿಕ ಬೆಲೆ 4.88 ಲಕ್ಷ ರೂಪಾಯಿ ಇದೆ.