ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ದಿನೇ ದಿನೇ ಅನಿಯಂತ್ರಿತವಾದ ಏರಿಕೆ ಕಂಡು ಬರುತ್ತಿದ್ದು ಆಟೋಮೊಬೈಲ್ ಮಾಲೀಕರ ಮೇಲಿನ ಹೊರೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಕೊಂಚ ರಿಲೀಫ್ ಕೊಡುವ ಸುದ್ದಿಯೊಂದರಲ್ಲಿ ವಾಹನಗಳ ಸಾಲದ ಮೇಲಿನ ಬಡ್ಡಿ ದರಗಳು ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿವೆ.
ಬಹುತೇಕ ಬ್ಯಾಂಕುಗಳು ವಾಹನ ಸಾಲದ ಮೇಲಿನ ಪರಿಷ್ಕರಣಾ ಶುಲ್ಕವನ್ನು ತೆಗೆದುಹಾಕಿದ್ದು, ಇನ್ನಷ್ಟು ಬ್ಯಾಂಕುಗಳು ಆನ್ ರೋಡ್ ಬೆಲೆಯ 90%ರಷ್ಟನ್ನು ಸಾಲ ನೀಡಲು ಮುಂದಾಗಿವೆ. ಕೆಲವೊಂದು ಬ್ಯಾಂಕುಗಳು 100% ಸಾಲ ಕೊಡುವುದಾಗಿಯೂ ಹೇಳಿಕೊಂಡಿವೆ. ಕಳೆದ ಎರಡು ವರ್ಷಗಳಿಂದ ಮೂರನೇ ಪಾರ್ಟಿಯ ಮೋಟರ್ ವಿಮೆಯ ಪ್ರೀಮಿಯಂನಲ್ಲಿ ಸಹ ಏರಿಕೆ ಕಂಡುಬಂದಿಲ್ಲ.
ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ..! ಸಿಗಲಿದೆ 30 ದಿನಗಳ ಬೋನಸ್
ವಾಹನ ಸಾಲದ ಮೇಲೆ ವಿವಿಧ ಬ್ಯಾಂಕುಗಳು ಆಫರ್ ಮಾಡುತ್ತಿರುವ ಬಡ್ಡಿ ದರದ ವಿವರ ಇಂತಿದೆ:
1. ಬ್ಯಾಂಕ್ ಆಫ್ ಇಂಡಿಯಾ: 6.85%
2. ಬ್ಯಾಂಕ್ ಆಫ್ ಬರೋಡಾ: 7%
3. ಪಂಜಾಬ್ ನ್ಯಾಷನಲ್ ಬ್ಯಾಂಕ್: 7.15%
4. ಎಚ್‌ಡಿಎಫ್‌ಸಿ ಬ್ಯಾಂಕ್: 7.5%
5. ಐಸಿಐಸಿಐ ಬ್ಯಾಂಕ್: 7.5%
ಮನೆಯ ʼಮುಖ್ಯ ದ್ವಾರʼದಲ್ಲಿದೆ ಲಕ್ಷ್ಮಿ ಒಲಿಸಿಕೊಳ್ಳುವ ಉಪಾಯ
ಉತ್ತಮ ಕ್ರೆಡಿಟ್ ಸ್ಕೋರ್ ಇರುವ ಮಂದಿಗೆ ಸಾಲಗಳನ್ನು ಇನ್ನಷ್ಟು ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ.
ಕಡಿಮೆ ಬಡ್ಡಿದರಗಳ ಕಾರಣದಿಂದಾಗಿ 5 ಲಕ್ಷ ರೂ.ಗಳ ಕಾರಿನ ಸಾಲವು ನಿಮಗೀಗ ಮಾಸಿಕ ಕಂತು 9,866 ರೂ.ಗಳಿಗೆ ತಗ್ಗಲಿದೆ.