
ಬೇಕಾಗುವ ಸಾಮಗ್ರಿಗಳು:
1 ಕಪ್ – ಬಾದಾಮಿ ಪುಡಿ, 1/3 ಕಪ್ – ಸಕ್ಕರೆ, ¼ ಕಪ್ – ನೀರು, 2 ಟೇಬಲ್ ಸ್ಪೂನ್ – ಹಾಲು, 1 ಟೀ ಸ್ಪೂನ್ – ತುಪ್ಪ, 2 ಟೇಬಲ್ ಸ್ಪೂನ್ – ಪಿಸ್ತಾ ಪೌಡರ್, ಕೇಸರಿದಳ – 7 ರಿಂದ 8.
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಸಕ್ಕರೆ, ಕೇಸರಿ, ನೀರು ಹಾಕಿ ಕುದಿಸಿಕೊಳ್ಳಿ. ಉರಿ ಸಣ್ಣಗೆ ಇಟ್ಟುಕೊಂಡು ಅದಕ್ಕೆ ಬಾದಾಮಿ ಪುಡಿಯನ್ನು ನಿಧಾನಕ್ಕೆ ಹಾಕಿ ನಂತರ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೈಬಿಡದೇ ತಿರುವುತ್ತಿರಿ.
ನಂತರ ತುಪ್ಪ ಹಾಕಿ 10 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ. ಇದು ತಳ ಬಿಡುತ್ತಿದ್ದಂತೆ ತುಪ್ಪ ಸವರಿದ ತಟ್ಟೆಗೆ ಹಾಕಿ 10 ನಿಮಿಷಗಳ ಕಾಲ ಬಿಟ್ಟು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.