alex Certify ಹಬ್ಬಕ್ಕೆ ಮಾಡಿ ಸವಿಯಿರಿ ʼಖರ್ಜೂರʼದ ಹೋಳಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬಕ್ಕೆ ಮಾಡಿ ಸವಿಯಿರಿ ʼಖರ್ಜೂರʼದ ಹೋಳಿಗೆ

ಬೇಳೆ ಹೋಳಿಗೆ, ಕಾಯಿ ಹೋಳಿಗೆ ಮಾಡಿಕೊಂಡು ಆಗಾಗ ತಿನ್ನುತ್ತಿರುತ್ತೇವೆ. ಖರ್ಜೂರದಿಂದಲೂ ರುಚಿಕರವಾದ ಹೋಳಿಗೆ ಮಾಡಿಕೊಂಡು ಸವಿಯಬಹುದು. ಇದಕ್ಕೆ ಬೆಲ್ಲ ಕೂಡ ಬೇಕಾಗಿಲ್ಲ. ಹಬ್ಬಹರಿದಿನಗಳು ಬಂದಾಗ ರುಚಿಕರವಾದ ಈ ಹೋಳಿಗೆ ಮಾಡಿಕೊಂಡು ಸವಿಯಿರಿ.

ಬೇಕಾಗುವ ಸಾಮಗ್ರಿ:

1 ಕಪ್ ಖರ್ಜೂರ, ¼ಕಪ್- ನೀರು, ಮೈದಾ ಹಿಟ್ಟು ¾ ಕಪ್, ಚಿರೋಟಿ ರವೆ-2 ಟೇಬಲ್ ಸ್ಪೂನ್, ¼ ಕಪ್-ನೀರು, ಎಣ್ಣೆ-2 ಟೇಬಲ್ ಸ್ಪೂನ್.

ಮಾಡುವ ವಿಧಾನ:

ಒಂದು ದೊಡ್ಡ ಬೌಲ್ ಗೆ ಮೈದಾ ಹಿಟ್ಟು, ಚಿರೋಟಿ ರವೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ½ ಟೇಬಲ್ ಸ್ಪೂನ್ ಎಣ್ಣೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಎಷ್ಟು ಬೇಕೋ ಅಷ್ಟು ನೀರು ಸೇರಿಸುತ್ತಾ ಕಲಸಿಕೊಳ್ಳಿ. ಹೋಳಿಗೆ ಹಿಟ್ಟಿನ ಹದಕ್ಕೆ ಬರಲಿ. ನಂತರ 1 ಟೇಬಲ್ ಸ್ಪೂನ್ ಎಣ್ಣೆ ಈ ಹಿಟ್ಟಿನ ಮೇಲೆ ಹಾಕಿ ಸ್ವಲ್ಪ ನಾದಿ 3 ಗಂಟೆಗಳ ಕಾಲ ಹಾಗೇ ಮುಚ್ಚಿಡಿ.

ಹಬ್ಬದಲ್ಲಿ ಶಾಪಿಂಗ್ ಮಾಡಲು ಹಣವಿಲ್ವಾ…? ಚಿಂತೆ ಬೇಡ, ಇಲ್ಲಿ ಸಿಗುತ್ತೆ ಸಾಲ

ನಂತರ ಕುಕ್ಕರ್ ತಳಕ್ಕೆ ನೀರು ಹಾಕಿ ಅದರ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಖರ್ಜೂರವನ್ನು ಹಾಕಿ ಆವಿಯಲ್ಲಿ ಬೇಯಿಸಿಕೊಳ್ಳಿ. 1 ವಿಷಲ್ ಬರಿಸಿಕೊಂಡರೆ ಸಾಕು.

ನಂತರ ಖರ್ಜೂರದ ಬೀಜ ತೆಗೆದು ಒಂದು ಮಿಕ್ಸಿ ಜಾರಿನಲ್ಲಿ ಖರ್ಜೂರ ಹಾಕಿ ಸಣ್ಣಕ್ಕೆ ರುಬ್ಬಿಕೊಳ್ಳಿ. ಇದು ಹೂರಣದ ಹದಕ್ಕೆ ಬಂದರೆ ಸಾಕು. ನಂತರ ಮೈದಾ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ.

ನಂತರ ಈ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಲಟ್ಟಿಸಿಕೊಳ್ಳಿ. ಇದರ ಮಧ್ಯೆ ಖರ್ಜೂರದ ಹೂರಣವಿಟ್ಟು ಮತ್ತೊಮ್ಮೆ ಲಟ್ಟಿಸಿಕೊಳ್ಳಿ. ಕಾದ ಕಾವಲಿಗೆ ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...