ನಾಳೆ ಯುಗಾದಿ ಹಬ್ಬ. ಹಬ್ಬಕ್ಕೆ ಮನೆಯಲ್ಲೇ ರುಚಿಕರವಾದ ಹಾಗೂ ಬೇಗನೆ ಆಗುವಂತಹ ಶೇಂಗಾ ಹೋಳಿಗೆ ಮಾಡುವ ವಿಧಾನ ಇಲ್ಲಿದೆ ನೀವೂ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಮೈದಾ ಹಿಟ್ಟು, 1 ಕಪ್, ಬೆಲ್ಲದ ಪುಡಿ, 1 ಕಪ್ ಶೇಂಗಾ ಬೀಜ (ಹುರಿದು ಸಿಪ್ಪೆ ತೆಗೆದಿಟ್ಟುಕೊಳ್ಳಿ), ಬಿಳಿ ಎಳ್ಳು – 1 ಟೇಬಲ್ ಸ್ಪೂನ್, ಚಿರೋಟಿ ರವೆ – 2 ಟೇಬಲ್ ಸ್ಪೂನ್, ಉಪ್ಪು – 1/4 ಟೀ ಸ್ಪೂನ್, ಏಲಕ್ಕಿಪುಡಿ – 1 ಟೀ ಸ್ಪೂನ್, ತುಪ್ಪ – 1 ಚಮಚ.
ಮಾಡುವ ವಿಧಾನ:
ಒಂದು ಬೌಲ್ ಗೆ ಮೈದಾ ಹಿಟ್ಟು, ರವೆ, ಉಪ್ಪು, 1 ಟೀ ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಸೇರಿಸಿ ನಾದಿಕೊಳ್ಳಿ. ಇದು ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ನಂತರ ಮಿಕ್ಸಿ ಜಾರಿಗೆ ಶೇಂಗಾ ಬೀಜ ಹಾಕಿ ಪುಡಿ ಮಾಡಿಕೊಳ್ಳಿ ತುಂಬಾ ನುಣ್ಣಗೆ ಆಗುವುದು ಬೇಡ. ನಂತರ ಇದಕ್ಕೆ ಬೆಲ್ಲದ ಪುಡಿ, ಏಲಕ್ಕಿ ಪುಡಿ ಹಾಕಿ ಮಿಕ್ಸಿಯಲ್ಲಿ ಒಂದು ಸುತ್ತು ತಿರುಗಿಸಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ.
ಇದಕ್ಕೆ 1 ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದಕ್ಕೆ 2 ಚಮಚದಷ್ಟು ಬಿಸಿ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಹೂರಣ ತಯಾರಿಸಿಕೊಳ್ಳಿ. ನಂತರ ಮೈದಾ ಹಿಟ್ಟಿನಿಂದ ಹದ ಗಾತ್ರದ ಉಂಡೆ ಕಟ್ಟಿಕೊಂಡು ಸ್ವಲ್ಪ ಲಟ್ಟಿಸಿ ಅದರ ಮಧ್ಯೆ ಮಾಡಿಟ್ಟುಕೊಂಡ ಶೇಂಗಾ ಹೂರಣವನ್ನು ಸ್ವಲ್ಪ ಇಟ್ಟು ಮಡಚಿ ಮತ್ತೊಮ್ಮೆ ಲಟ್ಟಿಸಿಕೊಳ್ಳಿ. ಕಾದ ತವಾದ ಮೇಲೆ ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ,