alex Certify ಹಬ್ಬಕ್ಕೆ ಮಾಡಿ ʼಕ್ಯಾರೆಟ್ʼ ಲಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬಕ್ಕೆ ಮಾಡಿ ʼಕ್ಯಾರೆಟ್ʼ ಲಾಡು

ಗಣೇಶ ಚತುರ್ಥಿ ಹತ್ತಿರ ಬರ್ತಿದೆ. ವಿನಾಯಕನಿಗೆ ಸಿಹಿಯೆಂದ್ರೆ ಇಷ್ಟ. ದೇವರನ್ನು ಒಲಿಸಿಕೊಳ್ಳಲು ಈ ಬಾರಿ ಗಜಮುಖನಿಗೆ ಕ್ಯಾರೆಟ್ ಲಾಡು ಅರ್ಪಿಸಿ.

ಕ್ಯಾರೆಟ್ ಲಾಡಿಗೆ ಬೇಕಾಗುವ ಪದಾರ್ಥ :

ಕ್ಯಾರೆಟ್ : 500 ಗ್ರಾಂ

ಸಕ್ಕರೆ : 100 ಗ್ರಾಂ

ತುಪ್ಪ : 3 ಚಮಚ

ಏಲಕ್ಕಿ ಪುಡಿ : 1 ಚಮಚ

ಗೋಡಂಬಿ : ಸಣ್ಣಗೆ ಕತ್ತರಿಸಿದ್ದು 1 ಚಮಚ

ಒಣ ದ್ರಾಕ್ಷಿ – 3-6

ತೆಂಗಿನ ತುರಿ : 1 ಕಪ್

ಕ್ಯಾರೆಟ್ ಲಾಡು ಮಾಡುವ ವಿಧಾನ :

ಕ್ಯಾರೆಟ್ ಸಿಪ್ಪೆ ತೆಗೆದು ತುರಿದುಕೊಳ್ಳಿ. ಒಂದು ಪಾತ್ರೆಗೆ ತುಪ್ಪ ಹಾಕಿ, ಬಿಸಿಯಾದ್ಮೇಲೆ ಕ್ಯಾರೆಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಸ್ವಲ್ಪ ಹುರಿಯಿರಿ. ಕ್ಯಾರೆಟ್ ತುರಿಯ ಹಸಿ ವಾಸನೆ ಹೋಗ್ತಿದ್ದಂತೆ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಇದ್ರ ಜೊತೆ ಏಲಕ್ಕಿ ಪುಡಿಯನ್ನು ಹಾಕಿ. ತೆಂಗಿನ ತುರಿ ಹಸಿ ವಾಸನೆ ಹೋದ್ಮೇಲೆ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕೈ ಆಡಿಸಿ. ಮಿಶ್ರಣ ಲಾಡು ಕಟ್ಟಲು ಬರ್ತಿದೆ ಎನ್ನಿಸುವಾಗ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿಯನ್ನು ಹಾಕಿ, ಗ್ಯಾಸ್ ಬಂದ್ ಮಾಡಿ. ನಂತ್ರ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...