ಬೇಕಾಗುವ ಸಾಮಾಗ್ರಿಗಳು: ಅವಲಕ್ಕಿ- 2 ಕಪ್, ಬೆಲ್ಲ- 1 ಕಪ್, ಕಾಯಿತುರಿ- ಅರ್ಧ ಕಪ್, ತುಪ್ಪ- 2 ಟೀ ಸ್ಪೂನ್, ದ್ರಾಕ್ಷಿ, ಗೋಡಂಬಿ, ಏಲಕ್ಕಿ-ಚಿಟಿಕೆ.
ಸಮಯಪ್ರಜ್ಞೆ ಮೆರೆದು ನಾಯಿಯ ಜೀವ ಕಾಪಾಡಿದ ಫುಟ್ಬಾಲ್ ಆಟಗಾರ
ಮಾಡುವ ವಿಧಾನ: ಮೊದಲಿಗೆ ಅವಲಕ್ಕಿಯನ್ನು 2 ನಿಮಿಷ ಕಾಲ ಚೆನ್ನಾಗಿ ಹುರಿಯಬೇಕು. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಬಳಿಕ ಇನ್ನೊಂದು ಬಾಣಲೆಯಲ್ಲಿ 2 ಟೀ ಸ್ಪೂನ್ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿಯನ್ನು ಹುರಿದು ಎತ್ತಿಡಿ. ನಂತರ 1 ಕಪ್ ಬೆಲ್ಲಕ್ಕೆ 1 ಕಪ್ ನೀರು ಹಾಕಿ ಕರಗಿಸಿ, 2ರಿಂದ 3 ನಿಮಿಷ ಕುದಿಸಿದ ನಂತರ ಅರ್ಧ ಕಪ್ ನಷ್ಟಿ ಕಾಯಿತುರಿ ಹಾಕಿ ಮಿಕ್ಸ್ ಮಾಡಿ.
ನಂತರ ಚಿಟಿಕೆ ಏಲಕ್ಕಿ ಹಾಕಿ ಕಡಿಮೆ ಉರಿಯಲ್ಲೇ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ನಂತರ ಉಳಿದಿರುವ ಅವಲಕ್ಕಿ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿ ಸ್ಟೌ ಆಫ್ ಮಾಡಿ. ನಂತರ ಹುರಿದಿರುವ ದ್ರಾಕ್ಷಿ, ಗೋಡಂಬಿ ಹಾಕಿ. ಬಿಸಿ ಇರುವಾಗಲೇ ಉಂಡೆ ಕಟ್ಟಿದರೆ ಸವಿಯಲು ರುಚಿಯಾದ ಅವಲಕ್ಕಿ ಲಡ್ಡು ರೆಡಿ.