ಶ್ರಾವಣ ಆರಂಭದ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಸಹ ಬರುತ್ತವೆ. ಈಗಾಗಲೇ ನಾಗರ ಪಂಚಮಿ ಆಚರಿಸಲಾಗಿದ್ದು, ಇಂದು ವರಮಹಾಲಕ್ಷ್ಮಿ ವ್ರತ ಇದೆ. ಇದಾದ ಬಳಿಕ ಗೌರಿ – ಗಣೇಶ, ದಸರಾ ದೀಪಾವಳಿ ಹಬ್ಬಗಳು ಬರಲಿದ್ದು, ಶುಭ ಸಂದರ್ಭದಲ್ಲಿ ಚಿನ್ನ ಖರೀದಿಸಬೇಕೆಂದುಕೊಂಡಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ.
ಗುರುವಾರದಂದು ರಾಷ್ಟ್ರ ರಾಜಧಾನಿ ನವದೆಹಲಿಯ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 487 ರೂಪಾಯಿ ಏರುವುದರ ಮೂಲಕ 52,566 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲೂ ಸಹ ಪ್ರತಿ ಕೆಜಿಗೆ 426 ರೂ. ಏರಿಕೆ ಕಂಡು 58,806 ರೂಪಾಯಿ ಮುಟ್ಟಿದೆ.
ಚಿನ್ನ – ಬೆಳ್ಳಿ ಬೆಲೆ ಏರಿಕೆಯು ಅಂತರಾಷ್ಟ್ರೀಯ ಮಾರುಕಟ್ಟೆ ಬೆಳವಣಿಗೆಗಳಿಗೆ ಅನುಗುಣವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.