alex Certify ಹನುಮ ಜಯಂತಿಯಂದೇ ಕಣ್ಣೀರಿಟ್ಟ ಆಂಜನೇಯ….! ಆತಂಕಕ್ಕೊಳಗಾದ ಗ್ರಾಮಸ್ಥರು….!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹನುಮ ಜಯಂತಿಯಂದೇ ಕಣ್ಣೀರಿಟ್ಟ ಆಂಜನೇಯ….! ಆತಂಕಕ್ಕೊಳಗಾದ ಗ್ರಾಮಸ್ಥರು….!!

ರಾಜ್ಯಾದ್ಯಂತ ಹನುಮ ಜಯಂತಿ ಆಚರಣೆ ಸಂಭ್ರಮ ಮನೆ ಮಾಡಿದೆ. ಈ ನಡುವೆ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಆಶ್ಚರ್ಯಕರ ಘಟನೆಯೊಂದು ವರದಿಯಾಗಿದೆ. ಹನುಮ ಜಯಂತಿ ಪ್ರಯುಕ್ತ ಆಂಜನೇಯನ ಮೂರ್ತಿಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆಯಲ್ಲಿ ವಾನರ ಕಣ್ಣೀರು ಸುರಿಸಿದ್ದಾನೆ..!

ಮೂರ್ತಿಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆಯಲ್ಲಿ ಹನುಮಂತನ ಕಣ್ಣಿನಿಂದ ಹನಿ ಹನಿ ನೀರು ಜಿನುಗಲಾರಂಭಿಸಿದೆ. ನಿರಂತರವಾಗಿ ಹನಿ ಹನಿ ರೂಪದಲ್ಲಿ ಆಂಜನೇಯನ ಕಣ್ಣಿನಿಂದ ನೀರು ಬರುತ್ತಿದೆ. ಹನುಮನ ಮೂರ್ತಿಯಲ್ಲಿ ಕಣ್ಣೀರನ್ನು ಕಂಡು ಗ್ರಾಮಸ್ಥರು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದು ಅಕ್ಕಪಕ್ಕದ ಗ್ರಾಮದವರೂ ಈಗ ಈ ದೃಶ್ಯವನ್ನು ನೋಡಲು ದೇಗಲುಕ್ಕೆ ಜಮಾಯಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...