ಹನುಮನ ಜನ್ಮಸ್ಥಳ ಕರ್ನಾಟಕವಾಗಿದ್ದರೂ ಸಹ ಆಂಧ್ರಪ್ರದೇಶ ಸೇರಿದಂತೆ ಕೆಲವೊಂದು ರಾಜ್ಯಗಳು ಹನುಮನ ಜನ್ಮಭೂಮಿ ತಮ್ಮ ರಾಜ್ಯದಲ್ಲಿದೆ ಎಂದು ಪ್ರತಿಪಾದಿಸಿಕೊಂಡು ಬಂದಿವೆ.
ಇದರ ಮಧ್ಯೆ ಕರ್ನಾಟಕ ಸರ್ಕಾರ, ಹನುಮನ ಜನ್ಮಸ್ಥಳ ವಿಜಯನಗರ ಜಿಲ್ಲೆ ಹಂಪಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಅದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಲು ಮುಂದಾಗಿದೆ.
ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಲಂಕೆಗೆ ಸೇತುವೆ ಕಟ್ಟಲು ಶ್ರಮಿಸಿದ ಹನುಮಾನ ನಾಡು ಕರ್ನಾಟಕ ಎಂದು ಹೇಳುವ ಮೂಲಕ ಹನುಮನ ಜನ್ಮಸ್ಥಳ ಕರ್ನಾಟಕ ಎಂಬ ಮಾತಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ.
ಗುರುವಾರದಂದು ನೆಲಮಂಗಲ ಸಮೀಪದ ಮಹಾದೇವಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಕೃತಿ ಚಿಕಿತ್ಸಾ ಕೇಂದ್ರ ‘ಕ್ಷೇಮವನ’ ಉದ್ಘಾಟನೆ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಈ ಮಾತುಗಳನ್ನಾಡಿದ್ದಾರೆ.