ಮಧುಚಂದ್ರದ ಬಗ್ಗೆ ಪ್ರತಿಯೊಬ್ಬರೂ ಕನಸು ಕಂಡಿರುತ್ತಾರೆ. ಹನಿಮೂನ್ ಗೆ ಎಲ್ಲಿಗೆ ಹೋಗ್ಬೇಕು ಎಂಬುದು ಮದುವೆ ಮುನ್ನವೇ ಬಹುತೇಕ ನಿರ್ಧಾರವಾಗಿರುತ್ತದೆ. ಇಬ್ಬರು ಸುಂದರ ಕ್ಷಣವನ್ನು ಸಂಪೂರ್ಣ ಅನುಭವಿಸಲು ಬಯಸ್ತಾರೆ. ಏಕಾಂತದಲ್ಲಿ ಪ್ರೀತಿ ಹಂಚುವ ಆಸೆ ಹೊಂದಿರುತ್ತಾರೆ.
ಆದ್ರೆ ಹೋದ ಜಾಗ, ಉಳಿದುಕೊಂಡ ಹೊಟೇಲ್ ನಿಮ್ಮ ಅನುಕೂಲಕ್ಕೆ ತಕ್ಕಂತೆ ಇಲ್ಲದೆ ಹೋದ್ರೆ ಹನಿಮೂನ್ ನಲ್ಲಿ ಬಯಸಿದ್ದು ಸಿಗುವುದಿಲ್ಲ. ಹಾಗಾಗಿ ಹನಿಮೂನ್ ಗೆ ಹೋಗುವ ಮೊದಲು ಹೊಟೇಲ್ ಬುಕ್ ಸೇರಿದಂತೆ ಅನೇಕ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಮಧುಚಂದ್ರದ ನೀವು ಯಾವ ಸ್ಥಳಕ್ಕೆ ಹೋಗಲು ಇಷ್ಟ ಪಡ್ತೀರೋ ಅದರ ಬಜೆಟ್ ಮೊದಲೇ ಸಿದ್ಧಪಡಿಸಬೇಕು. ಬುಕಿಂಗ್‌ನಿಂದ ಶಾಪಿಂಗ್‌ವರೆಗಿನ ಎಲ್ಲಾ ಖರ್ಚುಗಳು ನಿಮ್ಮ ಬಜೆಟ್ ಅನುಗುಣವಾಗಿರ್ಲಿ. ಇದ್ರಿಂದ ಹನಿಮೂನ್ ಗೆ ಹೋದಾಗ ಹಣಕಾಸಿನ ಯಾವುದೇ ಸಮಸ್ಯೆ ಆಗುವುದಿಲ್ಲ.
ಮದುವೆಯ ನಂತರ ಪ್ರಾರಂಭವಾಗುವ ಜೀವನವು ನವ ದಂಪತಿಗೆ ವಿಶೇಷವಾಗಿರುತ್ತದೆ. ನಿಮ್ಮ ಸಂಗಾತಿಯೊಡನೆ ಯಾವ ಊರು ಅಥವಾ ಸ್ಥಳ ಸೂಕ್ತ ಅನ್ನೋ ಬಗ್ಗೆ ಚರ್ಚಿಸಿ. ಹೀಗೆ ಮಾಡೋದ್ರಿಂದ ಇಬ್ಬರ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತದೆ.
ಯಾವುದೇ ಹೊಟೇಲ್ ರೂಂ ಕಾಯ್ದಿರಿಸುವಾಗ ಆ ಹೊಟೆಲ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ತರಾತುರಿಯಲ್ಲಿ ಬುಕಿಂಗ್ ಮಾಡಬೇಡಿ. ಕೆಲವೊಂದು ಕಡೆ ಸರಿಯಾದ ಸೌಲಭ್ಯ ಕೂಡ ಇರೋದಿಲ್ಲ. ಇದಲ್ಲದೆ ಕೋಣೆಗಳಲ್ಲಿ ಕ್ಯಾಮೆರಾ ಅಳವಡಿಸಿ ಬ್ಲಾಕ್ ಮೇಲ್ ಮಾಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಹೊಟೇಲ್ ಬಗ್ಗೆ ಸರಿಯಾದ ಮಾಹಿತಿ ಪಡೆದು ಬುಕ್ ಮಾಡಿ.
ಅನೇಕ ಕಂಪನಿಗಳು ಟೂರ್ ಪ್ಯಾಕೇಜ್ ನೀಡುತ್ತವೆ. ಅನೇಕ ಕಂಪನಿಗಳ ಪ್ಯಾಕೇಜ್ ಬಜೆಟ್ ಪರಿಶೀಲನೆ ನಡೆಸಿ ನಂತ್ರ ನಿಮಗೆ ಸೂಕ್ತವೆನಿಸುವ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಿ.