ಹೊಸದಾಗಿ ಮದುವೆಯಾದ ಜೋಡಿ ಸಾಮಾನ್ಯವಾಗಿ ಹನಿಮೂನ್ ಗೆ ಹೋಗೆ ಹೋಗ್ತಾರೆ. ಅದ್ರಲ್ಲೂ ವಿದೇಶ ಪ್ರವಾಸ ಅಂದ್ರೆ ಎಲ್ರಿಗೂ ಇಷ್ಟ. ಆದ್ರೆ ಹನಿಮೂನ್ ಗೆ ಎಲ್ಲಿಗೆ ಹೋಗೋದು ಎನ್ನುವ ಪ್ರಶ್ನೆ ಕಾಡುತ್ತೆ. ಸದ್ಯವೇ ನಿಮ್ಮ ಮದುವೆ ನಡೆದಿದ್ದು, ಹನಿಮೂನ್ ಪ್ಲಾನ್ ಮಾಡ್ತಿದ್ದರೆ ಕಡಿಮೆ ಬಜೆಟ್ ನಲ್ಲಿ ಈ ದೇಶಕ್ಕೆ ಹೋಗಿ ಬನ್ನಿ.
ಗ್ರೀಸ್, ಹನಿಮೂನ್ ಗೆ ಹೇಳಿ ಮಾಡಿಸಿದ ಸ್ಥಳ. ಐತಿಹಾಸಿಕ ಪರಂಪರೆ, ಉತ್ತಮ ರೆಸ್ಟೋರೆಂಟ್, ಮುದ ನೀಡುವ ಸುಂದರ ಕಡಲತೀರ, ಕಣ್ಮನ ಸೆಳೆಯುವ ಸ್ಯಾಂಟೊರಿನಿ ಮತ್ತು ಅಥೆನ್ಸ್ ಅತ್ಯಂತ ಜನಪ್ರಿಯ ದ್ವೀಪಗಳಿವೆ. ಇಲ್ಲಿಗೆ ನೀವು ಮೇ ನಿಂದ ಅಕ್ಟೋಬರ್ ವರೆಗೆ ಹೋಗಬಹುದು. ನೀವು ಆಕ್ರೊಪೊಲಿಸ್ ಮ್ಯೂಸಿಯಂ ಆಫ್ ಅಥೆನ್ಸ್, ಪ್ರಾಚೀನ ಡೆಲ್ಫಿ ಪ್ರದೇಶ, ಸ್ಯಾಂಟೊರಿನಿ ದ್ವೀಪಗಳು ಮತ್ತು ಸಮೇರಿಯಾ ಜಾರ್ಜ್ ನ್ಯಾಶನಲ್ ಪಾರ್ಕ್ ಗೆ ಭೇಟಿ ನೀಡಬಹುದು.
ಹನಿಮೂನ್ ಗೆ ಥೈಲ್ಯಾಂಡ್ ಬಜೆಟ್ ಸ್ನೇಹಿ ದೇಶವಾಗಿದೆ. ಇದು ಪರ್ವತ, ಕಡಲತೀರ, ಸಮುದ್ರ, ವನ್ಯಜೀವಿ ಸಂಕುಲಕ್ಕೆ ಪ್ರಖ್ಯಾತಿ ಹೊಂದಿದೆ. ಥೈಲ್ಯಾಂಡ್ ನಲ್ಲಿ ಫುಕೆಟ್ ದ್ವೀಪಗಳು, ಸುಂದರ ಪರ್ವತಗಳು ಮತ್ತು ಉಳಿಯಲು ವಿಶೇಷ ವಾಸಸ್ಥಳಗಳಿವೆ. ಇಲ್ಲಿ ಸೇತುವೆಯ ದಂಡೆಯಲ್ಲಿನ ಥಮ್ ಮೊಕೊಟ್ (ಕೇವ್), ಎರಾವನ್ ನ್ಯಾಷನಲ್ ಪಾರ್ಕ್, ಕ್ವಾಯ್ ನದಿಯಲ್ಲಿರುವ ಕಾವೊ ಫ್ಯಾನಮ್ ಬೆಂಚಾ ರಾಷ್ಟ್ರೀಯ ಉದ್ಯಾನವನ ಮತ್ತು ಮ್ಯಾಕ್ ದ್ವೀಪ ಹೀಗೇ ಒಂದಕ್ಕಿಂತ ಒಂದು ಉತ್ತಮ ಆಯ್ಕೆ ಇದೆ.
ಪಿರಾಮಿಡ್ ಮತ್ತು ನೈಲ್ ನದಿಯಿಂದಲೇ ಈಜಿಪ್ಟ್ ಪ್ರಸಿದ್ದಿ ಪಡೆದಿದೆ. ಈಜಿಪ್ಟ್ನಲ್ಲಿ ಹಲವಾರು ಪಿರಾಮಿಡ್ ಗಳು, ವಸ್ತು ಸಂಗ್ರಹಾಲಯಗಳು ಇವೆ. ನೈಲ್ ನದಿಯ ಉದ್ದಕ್ಕೂ ನಿಮ್ಮ ಸಂಗಾತಿಯೊಂದಿಗೆ ಆರಾಮಾಗಿ ವಾಕ್ ಮಾಡಿ ಬರಬಹುದು. ಇಲ್ಲಿ ನೀವು ಈಜಿಪ್ಟ್ ಮೃಗಾಲಯ, ಗಿಜಾ ಪಿರಾಮಿಡ್, ಈಜಿಪ್ಟ್ ಕಣಿವೆ, ಕಾರ್ನಾಕ್ ದೇವಸ್ಥಾನ, ಶಿಮಾರು ಉದ್ಯಾನವನಗಳು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ.
ಮಾರಿಷಸ್ ಅತಿ ಎತ್ತರದ ಸಮುದ್ರ ತೀರಗಳಲ್ಲಿ ಒಂದು. ಪ್ರಪಂಚದಾದ್ಯಂತ ಅನೇಕ ಪ್ರಸಿದ್ಧ ಸ್ಥಳಗಳು ಮಾರಿಷಸ್ನಲ್ಲಿವೆ. ನಿಮ್ಮ ಸಂಗಾತಿಯೊಂದಿಗೆ ವಿಹರಿಸ್ತಾ ಇದ್ರೆ ಸ್ವರ್ಗದಲ್ಲಿನ ಅನುಭವವಾಗುತ್ತದೆ.