ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಅಡುಗೆಯಲ್ಲಿ ಉಪ್ಪು ಬೇಕೇ ಬೇಕು. ಇಲ್ಲವಾದರೆ, ಆಹಾರ ರುಚಿಸುವುದೇ ಇಲ್ಲ. ಆದರೆ ಉಪ್ಪನ್ನು ಅತಿಯಾಗಿ ಬಳಸುವುದರಿಂದ ಪಾರ್ಶ್ವವಾಯು ಬರಬಹುದು.
ಹದಿಹರೆಯದಲ್ಲಿ ಅತಿಯಾಗಿ ಉಪ್ಪನ್ನು ಸೇವಿಸುವವರು ಇಂತಹ ತೊಂದರೆಗೀಡಾಗುವ ಸಾಧ್ಯತೆ ಇದೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಹೆಚ್ಚಾಗಿ ಉಪ್ಪನ್ನು ಬಳಸುವವರ ಹೃದಯ, ರಕ್ತನಾಳದ ಮೇಲೆ ಗಂಭೀರ ಪರಿಣಾಮ ಉಂಟಾಗಿ ಅಪದಮನಿಗಳು ಗಟ್ಟಿಯಾಗುತ್ತವೆ. ಹೀಗೆ ಆದಲ್ಲಿ ಹೃದಯಾಘಾತ, ಪಾರ್ಶ್ವವಾಯು ಬರಬಹುದಾಗಿರುತ್ತದೆ.
ಸೋಡಿಯಂ ಅನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಬಳಸಿದಾಗ, ಕುಗ್ಗಿದ ಅಪದಮನಿ ತೊಂದರೆ ಕಾಣಿಸಿಕೊಂಡು ಸಮಸ್ಯೆಯಾಗುತ್ತದೆ. ಹಾಗಾಗಿ ಹದಿಹರೆಯದಲ್ಲಿ ಸಾಧ್ಯವಾದಷ್ಟು ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ಹದಿಹರೆಯದಲ್ಲಿ ಉಪ್ಪನ್ನು ಅತಿಹೆಚ್ಚು ಬಳಸಿದಾಗ ಪಾರ್ಶ್ವವಾಯು, ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂಬುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇತ್ತೀಚೆಗೆ ನಡೆದ ಪೀಡಿಯಾಟ್ರಿಕ್ ಅಕಾಡೆಮಿಕ್ ಸೊಸೈಟಿಯ ಸಭೆಯಲ್ಲಿ ಸಂಶೋಧಕರು, ಹದಿಹರೆಯದಲ್ಲಿ ಅತಿಯಾದ ಉಪ್ಪು ಬಳಕೆಯಿಂದ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ ವರದಿಯನ್ನು ಮಂಡಿಸಿದ್ದಾರೆ.