ವೃದ್ಯಾಪ್ಯ ಬಂದ್ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಆದ್ರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ನೆರೆತು ಹೋಗಲಾರಂಭಿಸುತ್ತದೆ. ಆನುವಂಶೀಯತೆ, ಪೋಷಕಾಂಶಗಳ ಕೊರತೆ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳು ಈ ರೀತಿ ವಯಸ್ಸಲ್ಲದ ವಯಸ್ಸಲ್ಲಿ ಕೂದಲು ಬೆಳ್ಳಗಾಗಲು ಕಾರಣ. ಕೆಲವೊಂದು ಆಹಾರಗಳ ಸೇವನೆಯಿಂದ ನೀವು ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.
ಕಿತ್ತಳೆ : ಕೂದಲು ಸೊಂಪಾಗಿ ಬೆಳೆಯುವಂತೆ ಮಾಡಬಲ್ಲ ಕೊಲ್ಲಾಜನ್ ಪ್ರೋಟಿನ್ ಅನ್ನು ಕಿತ್ತಳೆಯಲ್ಲಿರುವ ವಿಟಮಿನ್ ಸಿ ಮೂಲಕ ಪಡೆಯಬಹುದು. ಕಿತ್ತಳೆ ಸೇವನೆಯಿಂದ ಕೂದಲು ಬೆಳ್ಳಗಾಗದಂತೆ ತಡೆಯಬಹುದು.
ಹುದುಗಿಸಿದ ಆಹಾರ : ಆರೋಗ್ಯಕರ ಕೂದಲಿಗೆ ಬೇಕಾದ ಅಂಶಗಳು ಇದರಲ್ಲಿವೆ. ಮೊಸರು, ಸೋಯಾ, ವಿನಿಗರ್ ನಂತಹ ಪದಾರ್ಥಗಳ ಸೇವನೆಯಿಂದ ಕೂದಲು ಬೆಳ್ಳಗಾಗಲು ಕಾರಣವಾಗುವ ಕೊರತೆಯನ್ನು ನೀಗಿಸಿಕೊಳ್ಳಬಹುದು.
ಮೊಟ್ಟೆ : ಮೊಟ್ಟೆಯಿಂದ ಮಾಡಿರೋ ಹೇರ್ ಮಾಸ್ಕ್ ಬಳಸೋದನ್ನು ಕೇಳಿರ್ತೀರಾ. ಮೊಟ್ಟೆಯಲ್ಲಿ ಹೇರಳವಾದ ಪ್ರೋಟೀನ್ ಇರುತ್ತದೆ, ಡ್ಯಾಮೇಜ್ ಆಗಿರೋ ಕೂದಲನ್ನು ಇದು ರಿಪೇರಿ ಮಾಡಬಲ್ಲದು. ವಿಟಮಿನ್ ಬಿ – 12 ಕೊರತೆಯಿಂದ ಕೂದಲು ಬೆಳ್ಳಗಾಗುತ್ತದೆ. ಕೂದಲಿಗೆ ಎಗ್ ಮಾಸ್ಕ್ ಹಾಕುವುದರಿಂದ ಇದನ್ನು ತಡೆಯಬಹುದು.