ದೇವದುರ್ಗ- ಇತ್ತೀಚಿನ ದಿನಗಳಲ್ಲಿ ಬೆಳೆಗಳ ಮಧ್ಯೆ ಗಾಂಜಾ ಬೆಳೆದು ಸಿಕ್ಕಿಬೀಳೋವ್ರ ಸಂಖ್ಯೆ ಹೆಚ್ಚಾಗಿದೆ. ಎಷ್ಟೋ ಘಟನೆಗಳು ಕಣ್ಮುಂದೆ ಇದ್ದರೂ ಜನ ಮಾತ್ರ ಹೀಗೆ ಬೆಳೆಯೋದನ್ನ ನಿಲ್ಲಿಸುತ್ತಿಲ್ಲ. ಇದೀಗ ಇಲ್ಲೊಬ್ಬ ವ್ಯಕ್ತಿಯೂ ಇದೇ ರೀತಿ ಗಾಂಜಾ ಬೆಳೆದು ಪೊಲೀಸರ ಅಥಿತಿಯಾಗಿದ್ದಾನೆ.
ಹೌದು, ರಾಯಚೂರಿನ ದೇವದುರ್ಗ ತಾಲೂಕಿನಲ್ಲಿ ಇಂಥಹದೊಂದು ಘಟನೆ ನಡೆದಿದೆ. ದೇವದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ನರಸಪ್ಪ ಎಂಬಾತ ಹತ್ತಿ ಬೆಳೆಯ ನಡುವೆ ಗಾಂಜಾ ಬೆಳೆಸಿದ್ದಾನೆ. ಸುಮಾರು 10 ಲಕ್ಷ ಬೆಲೆ ಬಾಳುವ ಗಾಂಜಾ ಗಿಡಗಳು ಇವಾಗಿವೆ.
ಖಚಿತ ಮಾಹಿತಿ ಮೇರೆಗೆ ಹೊಲಕ್ಕೆ ಹೋಗಿ ನೋಡಿದಾಗ ಗಾಂಜಾ ಗಿಡ ಇರೋದು ಗೊತ್ತಾಗಿದೆ. ಸುಮಾರು 80 ಕೆ.ಜಿ ಹಸಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು, ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಹಶಿಲ್ದಾರ್ ಶ್ರೀನಿವಾಸ್ ಚಾಪೆಲ್, ಇನ್ಸ್ಪೆಕ್ಟರ್ ಹೊಸಕೇರಪ್ಪ ಕೋಳುರು ನೇತೃತ್ವದಲ್ಲಿ ಇದನ್ನು ವಶಕ್ಕೆ ಪಡೆಯಲಾಗಿದೆ.