ಹತ್ತಿ ಬೆಳೆದ ರೈತರಿಗೆ ಈ ಬಾರಿ ಬಂಪರ್ ಧಾರಣೆ ಸಿಗುತ್ತಿದೆ. ಅದರಲ್ಲೂ ಹತ್ತಿ ಅವಕ ಈಗಷ್ಟೇ ಆರಂಭವಾಗಿದ್ದು, ಗುರುವಾರದಂದು ಚಿತ್ರದುರ್ಗ ಎಪಿಎಂಸಿಯಲ್ಲಿ ಧಾರಣೆ ಕ್ವಿಂಟಾಲ್ ಗೆ 12,886 ರೂಪಾಯಿ ತಲುಪಿದೆ. ಇದರಿಂದಾಗಿ ಹತ್ತಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕರ್ನಾಟಕವೂ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಹತ್ತಿಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದ್ದು, ಆದರೆ ಉತ್ತರ ಭಾರತದಲ್ಲಿ ಈ ಬಾರಿ ಮಳೆಯ ಕಾರಣ ಬೆಳೆ ನಷ್ಟವಾಗಿರುವುದರಿಂದ ಹತ್ತಿಗೆ ಬಂಪರ್ ಧಾರಣೆ ಸಿಕ್ಕಿದೆ ಎನ್ನಲಾಗಿದೆ.
ಅಪ್ಪಿತಪ್ಪಿಯೂ ಈ ಪಾತ್ರೆಯಲ್ಲಿ ಆಹಾರ ತಯಾರಿಸಬೇಡಿ
ಮತ್ತೊಂದು ಮಹತ್ವದ ಸಂಗತಿ ಎಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದರ ದುಪ್ಪಟ್ಟಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕ್ವಿಂಟಾಲ್ ಹತ್ತಿ 6,650 ರೂಪಾಯಿಗಳಿಗೆ ಮಾರಾಟವಾಗಿದ್ದು, ಗರಿಷ್ಠ 8000 ದರ ಸಿಕ್ಕಿತ್ತು.
ಆದರೆ ಈ ಬಾರಿ ಆರಂಭದಿಂದಲೇ ಅಂದರೆ 2021ರ ಮಾರ್ಚ್ ತಿಂಗಳಿಂದ ಗರಿಷ್ಠ ಅಂದರೆ ಕ್ವಿಂಟಾಲ್ ಹತ್ತಿಗೆ 8,833 ರೂಪಾಯಿ ದರ ಸಿಕ್ಕಿದ್ದು, ಇದೀಗ ಗುರುವಾರದಂದು ಕ್ವಿಂಟಾಲ್ ಹತ್ತಿ 12,866 ರೂಪಾಯಿಗಳಿಗೆ ಮಾರಾಟವಾಗಿದೆ.